
ತುಳುನಾಡ ರಕ್ಷಣಾ ವೇದಿಕೆ ಕಳೆದ 15 ವರ್ಷಗಳಿಂದ ತುಳುನಾಡಿನ ಅಭಿವೃದ್ಧಿ ಮತ್ತು ಐಕ್ಯತೆಗಾಗಿ ಹೋರಾಡುವ ಜಾತ್ಯಾತೀತ ಮತ್ತು ರಾಜಕೀಯ ರಹಿತ ನಂ.1 ಸಂಘಟನೆಯಾಗಿದ್ದು ಇದೀಗ ಉಡುಪಿ ಜಿಲ್ಲೆಯ ಮಹಿಳಾ ಘಟಕದ ನೂತನ ಅದ್ಯಕ್ಷರಾಗಿ ಶೋಭ ಪಾಂಗಳರವರನ್ನು ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ನಾಗಲಕ್ಷ್ಮಿಯವರನ್ನು ಈ ಕೂಡಲೇ ಜಾರಿಗೆ ಬರುವಂತೆ ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಮಂಡಳಿಯ ಅದ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪುರವರು ನೇಮಕ ಮಾಡಿರುತ್ತಾರೆ.
ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯ ವಿವಿಧ ಘಟಕಗಳ ಅದ್ಯಕ್ಷ ಮತ್ತು ಪಧಾದಿಕಾರಿಗಳ ನೇಮಕ ಮಾಡಲಾಗುವುದು ಎಂದು ಕೇಂದ್ರೀಯ ಮಂಡಳಿಯ ಸಂಘಟನೆ ಕಾರ್ಯದರ್ಶಿ ಮತ್ತು ಕೇಂದ್ರೀಯ ಕಚೇರಿ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬರವರು ಪ್ರಕಟಣೆ ಮೂಲಕ ತಿಳಿಸಿರುತ್ತಾರೆ


