
ಬೆಂಗಳೂರು: ನಗರದ ಇಂದಿರಾನಗರದಲ್ಲಿರುವಂತ ರಾಮೇಶ್ವರಂ ಕಫೆಯಲ್ಲಿ ನಿಗೂಢ ಸ್ಪೋಟ ಇಂದು ಉಂಟಾಗಿದೆ. ಈ ಸ್ಪೋಟದಲ್ಲಿ ಮಹಿಳೆ ಸೇರಿದಂತೆ ಐವರು ಗಾಯಗೊಂಡಿರೋದಾಗಿ ತಿಳಿದು ಬಂದಿದೆ.
ಬೆಂಗಳೂರಿನ ಇಂದಿರಾ ನಗರದಲ್ಲಿರುವಂತ ರಾಮೇಶ್ವರಂ ಕಫೆಯಲ್ಲಿ ನಿಗೂಢ ಸ್ಪೋಟವೊಂದು ಉಂಟಾಗಿದೆ. ಈ ಸ್ಪೋಟದಿಂದಾಗಿ ಮಹಿಳೆ ಸೇರಿದಂತೆ ಐವರು ಗಾಯಗೊಂಡಿದ್ದಾರೆ. ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಸ್ಪೋಟಕದ ಸ್ಥಳದಲ್ಲಿ ಐಡಿ ಕಾರ್ಡ್ ಗಳು ಸಿಕ್ಕಿರೋದಾಗಿ ಹೇಳಲಾಗುತ್ತಿದೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು, ಎಫ್‌ಎಸ್‌ಎಲ್ ತಂಡದ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.



ಭಾರಿ ಶಬ್ದದೊಂದಿಗೆ ಉಂಟಾದಂತ ಸ್ಪೋಟದಿಂದಾಗಿ ಅಕ್ಕ ಪಕ್ಕದ ಮನೆಯವರು ಭಯ ಭೀತಿಯಿಂದ ಮನೆಯಿಂದ ಹೊರ ಓಡಿ ಬಂದಿರೋದಾಗಿ ಹೇಳಲಾಗತ್ತಿದೆ. ಸಿಲಿಂಡರ್ ಸ್ಪೋಟದಿಂದ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಆ ಬಗ್ಗೆ ತನಿಖೆಯ ನಂತ್ರ ಮತ್ತಷ್ಟು ಮಾಹಿತಿ ತಿಳಿದು ಬರಬೇಕಿದೆ.