
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುರಾಣ ಪ್ರಸಿದ್ಧ ಕೊಂಡಾಣ ಕ್ಷೇತ್ರದ ಪಿಲಿಚಾಮುಂಡಿ ದೈವಸ್ಥಾನದ ನಿರ್ಮಾಣ ಹಂತದ ಭಂಡಾರ ಮನೆ ಕಟ್ಟಡವನ್ನು ರಾತ್ರೋರಾತ್ರಿ ಜೆಸಿಬಿ ಮೂಲಕ ಕಿಡಿಗೇಡಿಗಳು ಧ್ವಂಸಗೈದಿರುವುದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಡೂರು ತೀವ್ರವಾಗಿ ಖಂಡಿಸಿದ್ದಾರೆ.



ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಒಂದು ಧರ್ಮದ ಆರಾಧನಾಲಯ ಅದು ಮಂದಿರ ಅಥವಾ ಮಸೀದಿ ಅಥವಾ ಚರ್ಚ್ ಆಗಿದ್ದರು ಅದನ್ನು ಧ್ವಂಸ ಮಾಡೋದು ಅಪರಾಧ ಮತ್ತು ಹೇಯಾ ಕೃತ್ಯವಾಗಿದೆ ಅದನ್ನು ಯಾರೇ ಮಾಡಿದರು ಅವರ ವಿರುದ್ಧ ಕಾನೂನು ಕ್ರಮವನ್ನು ಸರ್ಕಾರ ಹಾಗೂ ಪೋಲಿಸ್ ಇಲಾಖೆ ಜರುಗಿಸಬೇಕು.
ಯಾವುದೇ ಧರ್ಮದ ಆರಾಧನಾಲಯಾದರು ಅದಕ್ಕೊಂದು ಗೌರವವಿದೆ ಅದರದೇ ಆದ ವಿಶ್ವಾಸ ಮತ್ತು ನಂಬಿಕೆ ಇದೆ ಇಂತಹ ಘಟನೆಗಳು ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ಒಪ್ಪುವಂತಹದ್ದಲ್ಲ.
ಆರೋಪಿಯ ಧರ್ಮ ಮತ್ತು ಜಾತಿ ನೋಡಿ ಘಟನೆಯನ್ನು ಖಂಡಿಸುವ ಹಾಗೂ ಪ್ರತಿಭಟನೆ ಹಮ್ಮಿಕೊಳ್ಳುವ ಮತ್ತು ಮಸೀದಿಯ ಒಳಗೆ ಮಂದಿರ ಹುಡುಕುವ ಬಿಜೆಪಿ ಸಂಘಪರಿವಾರದ ರೋಶಾವೇಶಗಳು ಈ ದೇವಸ್ಥಾನದ ಪ್ರಕರಣದ ಹಿಂದೆ ಕಾಣದೆ ಇರುವ ಅಜೆಂಡಾವನ್ನು ನೈಜ ಹಿಂದುಗಳು ಅರ್ಥ ಮಾಡಿಕೊಂಡು ಇವರಿಂದ ಅಂತರ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಈ ಘಟನೆಯ ಬಗ್ಗೆ ಸರ್ಕಾರ, ಜಿಲ್ಲಾಡಳಿತ ,ಫೋಲಿಸ್ ಇಲಾಖೆ ಸೂಕ್ತವಾದ ರೀತಿಯಲ್ಲಿ ತನಿಖೆ ಮಾಡಿ ಅಪರಾಧಿಗಳಿಗೆ ಕೂಡಲೇ ಕಠಿಣ ಕ್ರಮ ಜರುಗಿಸಬೇಕು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.