August 30, 2025
WhatsApp Image 2024-03-07 at 11.15.26 AM

ಪುತ್ತೂರು: ವ್ಯಕ್ತಿಯೋರ್ವರಿಗೆ ವಂತಿಗೆಯ ವಿಚಾರದಲ್ಲಿ ತಕರಾರು ತೆಗೆದು, ಅವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಘಟನೆ ಪುತ್ತೂರು ನಗರದ ಹೊರವಲಯದ ಸವಣೂರು ಮಸೀದಿಯ ಬಳಿ ನಡೆದಿದ್ದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಡಬ ತಾಲೂಕಿನ ಪುಣ್ಣಪ್ಪಾಡಿ ಗ್ರಾಮದ ಅಬ್ದುಲ್ ಗಫೂರ್ (45) ಅವರು ಸವಣೂರು ಮಸೀದಿಯ ಬಳಿ ತನ್ನ ಪರಿಚಯದ ಮಹಮ್ಮದ್ ಅವರೊಂದಿಗೆ ಮಾತನಾಡುತ್ತಿದ್ದಾಗ, ಆರೋಪಿ ಹಸೈನಾರ್ ಬಂದು ವಂತಿಗೆಯ ವಿಚಾರದಲ್ಲಿ ತಕರಾರು ತೆಗೆದು, ಬೈದು, ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ. ಸ್ಥಳಕ್ಕೆ ಅಬ್ದುಲ್ ಗಫೂರ್ ಅವರ ಅಣ್ಣ ಅಬ್ದುಲ್ ರಜಾಕ್ ಮತ್ತು ಇತರರು ಬಂದಿದ್ದು, ಈ ವೇಳೆ ಆರೋಪಿ ಹಸೈನಾ‌ರ್ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ಹೋಗಿದ್ದಾನೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಲಾಗಿದೆ

About The Author

Leave a Reply