March 11, 2026
WhatsApp Image 2024-03-08 at 4.27.04 PM

ಸುಳ್ಯ: ಕಟ್ಟಡದಿಂದ ಕಾಲುಜಾರಿ ಬಿದ್ದು ಗಂಭೀರ ಗಾಯಗೊಂಡ ವ್ಯಕ್ತಿ ಮೃತಪಟ್ಟ ಘಟನೆ ಅಡ್ಕಾರಿನಿಂದ ವರದಿಯಾಗಿದೆ.

ಅಡ್ಕಾರ್ ಜಿ ಅಬ್ದುಲ್ಲಾ ಎಂಬವರ ಮನೆಯಲ್ಲಿ ಪೈಟಿಂಗ್ ಕೆಲಸಕ್ಕಾಗಿ ನೀರು ಹಾಕಿ ತೊಳೆಯುತ್ತಿರುವ ಸಂದರ್ಭದಲ್ಲಿ ಅಡೂರು ಪಳ್ಳಂಗೊಡು ನಿವಾಸಿ ಜಬ್ಬಾರ್ ಎಂಬವರು ಕಾಲುಜಾರಿ ಕಟ್ಟಡದಿಂದ ಕೆಳಗೆ ಬಿದ್ದಿದ್ದರು.

ಅವರನ್ನು ಕೂಡಲೇ ಸುಳ್ಯದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಬಂದಿದ್ದು, ತಲೆಗೆ ಗಂಭೀರ ಗಾಯಗಳಿತ್ತು. ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ದಿದ್ದರು.ಅಲ್ಲಿಂದ ಚಿಕಿತ್ಸೆ ಫಲಕಾರಿಯಾಗದ ಕಾರಣ ಅಲ್ಲಿಂದ ಮನೆಗೆ ತರುತ್ತಿರುವ ಸಂದರ್ಭದಲ್ಲಿ ಆ್ಯಂಬುಲೆನ್ಸ್ ನಲ್ಲಿ ಮೃತಪಟ್ಟರು.

About The Author

Leave a Reply