ಜಿಲ್ಲಾಡಳಿತದಿಂದ ಭಜರಂಗದಳ ಕಾರ್ಯಕರ್ತನಿಗೆ ‘ಗಡಿಪಾರು’ ನೋಟಿಸ್ ಜಾರಿ

ಜಿಲ್ಲಾಡಳಿತದಿಂದ ಬಜರಂಗದಳ ಕಾರ್ಯಕರ್ತನಿಗೆ ಗಡಿಪಾರು ನೋಟಿಸ್ ಜಾರಿ ಮಾಡಿದೆ.ಚಿಕ್ಕಮಂಗಳೂರು ಜಿಲ್ಲಾ ಘಟಕದ ಬಜರಂಗದಳದ ಮಾಜಿ ಸಂಚಾಲಕರಾಗಿದ್ದರು ಎಂದು ತಿಳಿದುಬಂದಿದೆ.

ತುಡಕೂರು ಮಂಜುಗೆ ಜಿಲ್ಲಾಡಳಿತ ಗಡಿಪಾರು ನೋಟಿಸ್ ಜಾರಿ ಮಾಡಿದೆ ಎಂದು ಹೇಳಲಾಗುತ್ತಿದೆ. ತುಡಕೂರು ಮಂಜು ಚಿಕ್ಕಮಂಗಳೂರು ಜಿಲ್ಲಾ ಘಟಕದ ಬಜರಂಗದಳದ ಮಾಜಿ ಸಂಚಾಲಕರಾಗಿದ್ದರು.ಅಲ್ಲದೆ ಅವರು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. 17 ಕಾರಣಗಳನ್ನು ನೀಡಿ ಇದೀಗ ಚಿಕ್ಕಮಂಗಳೂರು ಜಿಲ್ಲಾಡಳಿತ ಅವರಿಗೆ ಗಡಿಪಾರು ನೋಟಿಸ್ ಜಾರಿ ಮಾಡಿದೆ.

ಅಲ್ಲದೆ ಮಾರ್ಚ್ 14 ರಂದು ಜಿಲ್ಲಾಧಿಕಾರಿಗಳ ಎದುರು ಹಾಜರಾಗಲು ಸೂಚನೆ ನೀಡಿದೆ. ಸಂಘಟನೆ ಹೋರಾಟದಲ್ಲಿ ತುಡಕೂರು ಮಂಜು ವಿರುದ್ಧ 24 ಕೇಸ್ಗಳಿವೆ. 24 ಕೇಸ್ ಗಳ ಪೈಕಿ 22 ಪ್ರಕರಣಗಳು ನ್ಯಾಯಾಲಯದಲ್ಲಿ ಖುಲಾಸೆಯಾಗಿದೆ. ಇದೀಗ ಜಿಲ್ಲಾಡಳಿತ ನೀಡಿದ ನೋಟಿಸ್ ಬಾರಿ ಚರ್ಚೆಗೆ ಕಾರಣವಾಗಿದೆ.

Leave a Reply