October 13, 2025
WhatsApp Image 2024-03-12 at 10.28.08 AM

ತ್ತರಪ್ರದೇಶ: ಉತ್ತರ ಪ್ರದೇಶದ ಹಾಪುರ್ ನಗರದ್ದು ಎಂದು ಹೇಳಲಾಗುತ್ತಿರುವ ಅಸಹ್ಯಕರವಾದ ವಿಡಿಯೋವೊಂದು ವೈರಲ್ ಆಗಿದೆ. ನಗರದ ಬುಲಂದ್‌ಶಹರ್ ರಸ್ತೆಯಲ್ಲಿರುವ ಹೋಟೆಲ್‌ವೊಂದರಲ್ಲಿ ಕಾರ್ಮಿಕನೊಬ್ಬ ಉಗುಳಿದ ಮೇಲೆ ರೊಟ್ಟಿ ಮಾಡುತ್ತಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಜನ ಸಿಟ್ಟು ಹೊರಹಾಕಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ಯುವಕನೊಬ್ಬ ಕಾರಿನಲ್ಲಿ ಕುಳಿತು ಮಾಡಿದ್ದಾನೆ. ಅಲ್ಲಿ ರೊಟ್ಟಿ ಮಾಡುವ ಹುಡುಗ ನಿರಂತರವಾಗಿ ಉಗುಳಿದ ಮೇಲೆ ರೊಟ್ಟಿ ಮಾಡುತ್ತಿದ್ದ. ಹುಡುಗರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್​​​​ಲೋಡ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಜನರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಪೊಲೀಸರು ಈ ವಿಷಯವನ್ನು ಅರಿತು ತನಿಖೆ ಆರಂಭಿಸಿದ್ದಾರೆ. ಇದಕ್ಕೂ ಮುನ್ನ ಉಗುಳುವ ಮೂಲಕ ರೊಟ್ಟಿ ಮಾಡುವ ವಿಡಿಯೋ ಹಲವಾರು ಬಾರಿ ರಿವೀಲ್ ಆಗಿತ್ತು. ಯುಪಿಯ ಮೀರತ್ ಮತ್ತು ಲಕ್ನೋದಲ್ಲಿ ಇದೇ ರೀತಿಯ ವಿಡಿಯೋ ವೈರಲ್ ಆಗಿತ್ತು. ಮೇ 2022 ರಲ್ಲಿ ಮೀರತ್‌ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ತಂದೂರಿ ರೊಟ್ಟಿಯ ಮೇಲೆ ಉಗುಳುವ ಪ್ರಕರಣ ವರದಿಯಾಗಿದೆ.

About The Author

Leave a Reply