Visitors have accessed this post 714 times.
ಬೆಂಗಳೂರು: ಲೋಕಸಭಾ ಚುನಾವಣೆ 2024 ಗಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಕುತೂಹಲ ಕೆರಳಿಸಿತ್ತು.
ದಕ್ಷಿಣ ಕನ್ನಡದಿಂದ ನಳಿನ್ ಕುಮಾರ್ ಕಟೀಲಿಗೆ ಕ್ಷೇತ್ರ ಕೈತಪ್ಪಿದ್ದು, ಕ್ಯಾ. ಬ್ರಿಜೇಶ್ ಚೌಟ ಅವರಿಗೆ ಅವಕಾಶ ನೀಡಲಾಗಿದೆ.
ಉಡುಪಿಯಿಂದ ಮಾಜಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಕಣಕ್ಕೆ ಇಳಿಯಲಿದ್ದಾರೆ. ಈ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಬೆಂಗಳೂರು ಉತ್ತರದಿಂದ ಟಿಕೇಟ್ ನೀಡಲಾಗಿದೆ.
ಬೆಂಗಳೂರು ಉತ್ತರ ಸಂಸದರಾಗಿದ್ದ ಡಿ.ವಿ. ಸದಾನಂದ ಗೌಡ ಅವರಿಗೆ ಟಿಕೇಟ್ ಕೈತಪ್ಪಿದೆ.
ಮೈಸೂರಿನಿಂದ ಯದುವೀರ್ ಕಣಕ್ಕೆ ಇಳಿಯಲಿದ್ದು, ಪ್ರತಾಪ್ ಸಿಂಹ ಅವರಿಗೆ ಟಿಕೇಟ್ ನೀಡಿಲ್ಲ.
ಹಾಗಾದ್ರೇ ಯಾರು ಎಲ್ಲಿಂದ ಎಲ್ಲಿಗೆಎನ್ನುವುದನ್ನು ನೋಡುವುದಾದ್ರೆ
- ತುಮಕೂರು ವಿ ಸೋಮಣ್ಣ
- ಮೈಸೂರು ಯಾದ್‌ವೀರ್
- ದ. ಕನ್ನಡ ಬ್ರೀಜೇಶ್ ಚೌಟ
- ಬೆಂಗಳೂರು ಗ್ರಾಮಾಂತರ : ಸಿ.ಎನ್ ಮಂಜುನಾಥ್
- ಬೆಂಗಳೂರು ಕೇಂದ್ರ -ಪಿ.ಸಿಮೋಹನ್
- ಬೆಂಗಳೂರು ದ: ತೇಜಸ್ವಿ ಸೂರ್ಯ
- ಬೆಂಗಳೂರು ಉತ್ತರ; ಶೋಭಾ
- ದಾವಣಗೆರೆ: ಗಾಯತ್ರಿ ಸಿದ್ದೇಶ್ವರ
- ವಿಜಯಪುರ: ರಮೇಶ್ ಜಿಗಜಿಗಣಿ
- ಹಾವೇರಿ: ಮಾಜಿ ಸಿಎಂ ಬಸವರಾಜಬೊಮ್ಮಾಯಿ
- ಧಾರವಾಡ: ಪ್ರಹ್ಲಾದ್ ಜೋಶಿ
- ಚಿಕ್ಕೋಡಿ-ಅಣ್ಣ ಸಾಹೇಬ್ ಜೊಲ್ಲೆ
- ಬಾಗಲಕೋಟೆ-ಪಿ.ಸಿ ಗೌದ್ದಿಗೆಗದ್ದರ್
- ಕಲಬುರಗಿ-ಉಮೇಶ್ ಜಾಧವ್
- ಬೀದರ್ -ಭಗಂವಂಥ್ ಕೂಬ
- ಕೊಪ್ಪಳ-ಬಸವರಾಜ ಕ್ಯಾವತರ್
- ಬಳ್ಳಾರಿ ಶ್ರೀರಾಮುಲು
- ಉಡುಪಿ-ಚಿಕ್ಕಮಗಳೂರು-ಕೋಟಾ ಶ್ರೀನಿವಾಸ
- ಚಾಮರಾಜನಗರ-ಎಸ್ ಬಾಲರಾಜ್