
ಸುರತ್ಕಲ್: ಈಜಲು ಹೋಗಿ ನೀರುಪಾಲಾಗಿದ್ದ ಸುರತ್ಕಲ್ ವಿದ್ಯಾದಾಯಿನಿ ಶಾಲೆಯ ನಾಲ್ಕು ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರದ ಮುಖ್ಯಮಂತ್ರಿ ಪರಿಹಾರ ನಿಧಿಯ ಪರಿಹಾರದ ಚೆಕ್ ಗಳನ್ನು ಮಾಜೀ ಶಾಸಕ ಮೊಯ್ದೀನ್ ಬಾವ ಶುಕ್ರವಾರ ವಿತರಿಸಿದರು. ಶಾಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪರಿಹಾರದ ಆದೇಶ ಪ್ರತಿಗಳನ್ನು ಮೃತ ವಿದ್ಯಾರ್ಥಿಗಳ ಪೋಷಕರಿಗೆ ಹಸ್ತಾಂತರಿಸಿ ಮಾತನಾಡಿದ ಬಾವಾ, ಪೋಷಕರು ಮಕ್ಕಳ ಬಗ್ಗೆ ಜಾಗೃತೆ ವಹಿಸಬೇಕು. ಮಕ್ಕಳೊಂದಿಗೆ ಅವರ ಸ್ನೇಹಿತರಂತೆ ವ್ಯವಹರಿಸುವ ಮೂಲಕ ಅವರ ಚಲನ ವಲನಗಳ ಮೆಳೆ ನಿಗಾ ಇಡಬೇಕೆಂದು ನುಡಿದರು. ಪರಿಹಾರ ಕೊಡಿಸುವಲ್ಲಿ ತನ್ನ ಕೈಯ್ಯಲ್ಲಿ ಆಗಿರುವಷ್ಟು ಮಾಡಿರುತ್ತೇನೆ ಎಂದು ನುಡಿದರು. ಇದೇ ಸಂದರ್ಭ ಸರಕಾರದಿಂದ ಪರಿಹಾರ ಕಲ್ಪಿಸುವಲ್ಲಿ ಅವಿರತ ಶ್ರಮಿಸಿದ ಮೊಯ್ದೀನ್ ಬಾವಾ ಅವರನ್ನು ಶಾಲೆಯ ವತಿಯಿಂದ ಗೌರವಿಸಲಾಯಿತು. ಎಚ್. ಯು. ಅನಂತಯ್ಯ, ಶ್ರೀರಂಗ ಎಚ್., ಟಿ.ಎನ್. ರಮೇಶ್, ಎಂ. ರಾಮಚಂದ್ರ ಮೊದಲಾದವರು ಉಪಸ್ಥಿತರಿದ್ದರು.


