August 30, 2025
WhatsApp Image 2024-03-16 at 3.59.53 PM

ಭಾರತದಲ್ಲಿ 18ನೇ ಲೋಕಸಭಾ ಚುನಾವಣೆಗೆ ಮುಖ್ಯ ಚುನಾವಣಾ ಆಯೋಗ ದಿನಾಂಕವನ್ನ ಘೋಷಿಸಿದ್ದು, ದೇಶದಲ್ಲಿ 7 ಹಂತದಲ್ಲಿ ಚುನಾವಣೆ ನಡೆಯಲಿದೆ. ಅದ್ರಂತೆ, ಏಪ್ರಿಲ್ 19ರಿಂದ ಲೋಕಸಭೆ ಚುನಾವಣೆ ಆರಂಭವಾಗಿದೆ. ಇನ್ನು ಜೂನ್ 4ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

 

ದೆಹಲಿ ವಿಜ್ಞಾನ ಭವನದಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಚುನಾವಣಾ ದಿನಾಂಕವನ್ನ ಪ್ರಕಟಿಸಿದ್ದಾರೆ. ಅಂದ್ಹಾಗೆ, ದೇಶದ 543 ಕ್ಷೇತ್ರಗಳಲ್ಲಿ ಈ ಚುನಾವಣೆ ನಡೆಯಿದೆ.

ಇನ್ನೀದು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಸರ್ಕಾರದ ನೇತೃತ್ವದ ಪ್ರಸ್ತುತ ಲೋಕಸಭಾ ಅಧಿವೇಶನದ ಅಂತ್ಯವನ್ನು ಸೂಚಿಸುತ್ತದೆ. 17ನೇ ಲೋಕಸಭೆಯ ಅಧಿವೇಶನವು ಜೂನ್ 16, 2024 ರಂದು ಕೊನೆಗೊಳ್ಳಲಿದೆ. ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಚಾರವನ್ನ ಮುಂದುವರಿಸುತ್ತಿರುವುದರಿಂದ, NDA ಮತ್ತು ಇತ್ತೀಚೆಗೆ ರೂಪುಗೊಂಡ I.N.D.I.A. ಬಣವು ಮುಖಾಮುಖಿ ಯುದ್ಧಕ್ಕೆ ಸಜ್ಜಾಗಿದೆ.

2019ರ 17ನೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ NDA 543 ಸ್ಥಾನಗಳಲ್ಲಿ 353 ಸ್ಥಾನಗಳನ್ನು ಗಳಿಸಿತು. ಬಿಜೆಪಿ ಏಕಾಂಗಿಯಾಗಿ 303 ಸ್ಥಾನಗಳನ್ನ ಪಡೆದುಕೊಂಡಿದ್ದು, ಅಗತ್ಯ ಬಹುಮತದ 272 ಸ್ಥಾನಗಳನ್ನ ಮೀರಿದೆ.

About The Author

Leave a Reply