ವಿಟ್ಲ: ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ) ಮಂಗಳೂರು, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಕನ್ಯಾನ ಗ್ರಾಮ ಪಂಚಾಯತ್ ಸ್ಫೂರ್ತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ (ರಿ) ಕನ್ಯಾನ ಇದರ ಜಂಟಿ ಆಶ್ರಯದಲ್ಲಿ ಕನ್ಯಾನ ಸಂಜೀವಿನಿ ಕಾರ್ಯಾಲಯದಲ್ಲಿ ಮಾ.16 ರಂದು ಕೃತಕ ಆಭರಣ ತರಬೇತಿಯ ಸಮಾರೋಪ ಸಮಾರಂಭ ನಡೆಯಿತು.
ಪಂಚಾಯತ್ ಉಪಾಧ್ಯಕ್ಷರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅಥಿತಿಗಳಾಗಿ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ಕಾರ್ಯನಿರ್ವಹಣಾಧಿಕಾರಿ ಸಚಿನ್ ಹೆಗ್ಡೆ ಹಾಗೂ ಮಣಿಪಾಲ ವಿಕಾಸ ಟ್ರಸ್ಟ್ ಕಾರ್ಯಕ್ರಮ ವ್ಯವಸ್ಥಾಪಕರಾದ ಜೀವನ್ ಕೊಲ್ಯ,ಪಂಚಾಯತ್ ಅಭಿವೃದ್ದಿ ಅಧಿಕಾರಿ ,ಪಂಚಾಯತ್ ಸದಸ್ಯರು ಒಕ್ಕೂಟ ಅದ್ಯಕ್ಷರು ಹಾಗು ತಾಲೂಕ್ ಸಂಜೀವಿನಿ ವ್ಯವಸ್ಥಾಪಕರಾದ ಪ್ರದೀಪ್ ಕಾಮತ್ ಹಾಜರಿದ್ದರು.
ವೇದಿಕೆಯಲ್ಲಿದ್ದ ಗಣ್ಯ ವ್ಯಕ್ತಿಗಳು ತರಬೇತಿ ಪಡೆದ ಸದಸ್ಯರಿಗೆ ಶುಭ ಹಾರೈಸಿದರು. ನಂತರ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.