October 27, 2025
WhatsApp Image 2024-03-17 at 12.30.42 PM

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಗೆ ಪತ್ರಕರ್ತ ತಾರನಾಥ್ ಗಟ್ಟಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಗೆ ಉಮರ್ ಯು ಎಚ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಜೋಕಿಂ ಸ್ನಾನಿ ಅಲ್ವಾರಿಸ್ ಅವರನ್ನು ಅಧ್ಯಕ್ಷರನ್ನಾಗಿ ರಾಜ್ಯ ಸರಕಾರ ನೇಮಕ ಮಾಡಿದೆ.

ತುಳು ಅಕಾಡೆಮಿಯ ಸದಸ್ಯರಾಗಿ ಪೃಥ್ವಿರಾಜ್, ಕುಂಬ್ರ ದುರ್ಗಪ್ರಸಾದ್ ರೈ, ಮೋಹನ್ ದಾಸ್ ಕೊಟ್ಟಾರಿ, ಅಕ್ಷಯ್ ಆ‌ರ್. ಶೆಟ್ಟಿ, ಶೈಲೇಶ್‌ ಬಿನ್ ಭೋಜ ಸುವರ್ಣ, ಕಿಶೋ‌ರ್ ಬಿನ್ ಗುಡ್ಡಪ್ಪ ಗೌಡ, ಬೂಬ ಪೂಜಾರಿ, ರೋಹಿತಾಶ್ವ ಯು. ಕಾಪಿಕಾಡ್, ನಾಗೇಶ್ ಕುಮಾರ್ ಉದ್ಯಾವರ, ಸಂತೋಷ್‌ ಶೆಟ್ಟಿ ನೇಮಕಗೊಂಡಿದ್ದಾರೆ. ಬ್ಯಾರಿ ಅಕಾಡಮಿಯ ಸದಸ್ಯರಾಗಿ ಬಿ.ಎಸ್.ಮುಹಮ್ಮದ್ ಚಿಕ್ಕಮಗಳೂರು, ಹಫ್ತಾ ಬಾನು ಬೆಂಗಳೂರು, ಸಾರಾ ಅಲಿ ಪರ್ಲಡ್ಕ ಶಮೀರಾ ಜಹಾನ್, ಯು.ಎಚ್. ಖಾಲಿದ್ ಉಜಿರೆ, ತಾಜುದ್ದೀನ್, ಅಬೂಬಕರ್ ಅನಿಲಕಟ್ಟೆ, ಅಬ್ದುಲ್ ಶರೀಫ್, ಹಮೀದ್ ಹಸನ್ ಮಾಡೂರು, ಸಮೀರ್ ಮುಲ್ಕಿ ಅವರನ್ನು ನೇಮಕ ಮಾಡಲಾಗಿದೆ. ಕೊಂಕಣಿ ಅಕಾಡೆಮಿಯ ಸದಸ್ಯರಾಗಿ ವಂ.ಪ್ರಕಾಶ್‌ ಮಾಡ್ತಾ ರೊನಾಲ್ಡ್ ಕ್ರಾಸ್ತಾ, ಡಾ. ವಿಜಯಲಕ್ಷ್ಮಿ ನಾಯಕ್, ನವೀನ್ ಲೋಬೋ, ಸಪ್ನಾಮೇ ಕ್ರಾಸ್ತಾ, ಸಮರ್ಥ್ ಭಟ್, ಸುನಿಲ್ ಸಿದ್ವಿ, ಜೇಮ್ಸ್ ಲೋಪಿಸ್, ದಯಾನಂದ ಮುಡೈಕರ್, ಪ್ರಮೋದ್ ಪಿಂಟೋ ನೇಮಕಗೊಂಡಿದ್ದಾರೆ.

About The Author

Leave a Reply