October 27, 2025
WhatsApp Image 2024-03-11 at 9.13.14 AM

ಪಡುಬಿದ್ರಿ: ಹೆಜಮಾಡಿ ಗ್ರಾಮದ ಕ್ರಿಸ್ಟನ್ ಡಿ’ಸೋಜಾ ಅವರಿಗೆ 2023ರ ಅಕ್ಟೋಬರ್‌ನಿಂದ 2024ರ ಫೆಬ್ರವರಿವರೆಗೆ ಬೇರೆ ಬೇರೆ ದಿನಗಳಲ್ಲಿ ಗ್ಲೋಬಲ್ ಕೆರಿಯರ್ ಸೊಲ್ಯೂಶನ್ ಎಂಬ ಕಂಪೆನಿಯ ಹೆಸರಿನಲ್ಲಿ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಈರ್ವರು 4,42,645 ಲಕ್ಷ ರೂ. ವಂಚಿಸಿರುವುದಾಗಿ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಿತ್ ಮತ್ತು ಸುಭಾಸ್ ಎಂಬವರು ಒಟ್ಟು 3 ಮೊಬೈಲ್‌ ನಂಬರ್‌ಗಳಿಂದ ಪರಿಚಯಿಸಿಕೊಂಡು, ಕರೆ ಮಾಡಿ ಕ್ರಿಸ್ಟನ್‌ರಿಂದ ಹಣವನ್ನು ಗೂಗಲ್ ಪೇ ಮೂಲಕ ಪಡೆದು, ಉದ್ಯೋಗವನ್ನೂ ನೀಡಲೇ, ಹಣವನ್ನೂ ಹಿಂತಿರುಗಿಸದೇ ಮೋಸ ಮಾಡಿರುವುದಾಗಿ ದೂರಲ್ಲಿ ವಿವರಿಸಲಾಗಿದೆ.

About The Author

Leave a Reply