ಸುಳ್ಯ: ಕೂಜಿಮಲೆಯಲ್ಲಿ ನಕ್ಸಲರ ಸಂಚಾರ!

ಸುಳ್ಯ: ದಕ್ಷಿಣ ಕನ್ನಡ, ಕೊಡಗು ಗಡಿಭಾಗದ ಮಡಿಕೇರಿ ತಾಲೂಕು ಕಡಮಕಲ್ಲು ಬಳಿಯ ಕೂಜಿಮಲೆ ರಬ್ಬರ್‌ ಎಸ್ಟೇಟ್‌ ಬಳಿ ಶನಿವಾರ ಸಂಜೆ ನಕ್ಸಲರು ಸಂಚರಿಸಿರುವ ಶಂಕೆ ವ್ಯಕ್ತವಾಗಿದೆ.

8 ಜನ ಶಂಕಿತ ನಕ್ಸಲರಿದ್ದ ತಂಡ ಕೂಜಿಮಲೆ, ಕಲ್ಮ ಕಾರಿನ ಅಂಗಡಿಯೊಂದ ರಿಂದ 3,500 ರೂ. ಮೌ ಲ್ಯದ ದಿನಸಿ ಖರೀದಿಸಿದ್ದಾರೆ ಎನ್ನಲಾಗಿದೆ.5 ವರ್ಷದ ಬಳಿಕ ಮತ್ತೆ ಅದೇ ಭಾಗದಲ್ಲಿ ನಕ್ಸಲ್‌ ತಂಡ ಪ್ರತ್ಯಕ್ಷವಾಗಿದೆ ಎಂದು ಹೇಳಲಾಗಿದೆ.

ನಕ್ಸಲರು ಕಾಣಿಸಿಕೊಂಡ ಮಡಿಕೇರಿ ಗ್ರಾಮಾಂತರ ಠಾಣೆ ವ್ಯಾಪ್ತಿಯ ಕಾಲೂರಿನಲ್ಲಿ ಕೂಬಿಂಗ್‌ ಕಾರ್ಯಾಚರಣೆ ಆರಂಭಗೊಂಡಿದೆ ಎಂದು ಮೂಲಗಳು ತಿಳಿಸಿವೆ.ಸುಳ್ಯದ ಗುತ್ತಿಗಾರು, ಕೊಲ್ಲಮೊಗರು, ಕಲ್ಮಕಾರು ವರೆಗೂ ಕೂಜಿಮಲೆ ರಬ್ಬರ್ ಎಸ್ಟೇಟ್ ವ್ಯಾಪ್ತಿ

2012 ರಲ್ಲಿ ಕಾಲೂರು ಗ್ರಾಮದಲ್ಲಿ ಪ್ರತ್ಯಕ್ಷಗೊಂಡಿದ್ದರು.ಬಳಿಕ 2018 ರ ಫೆಬ್ರವರಿ ತಿಂಗಳಿನಲ್ಲಿ ಇದೆ ವ್ಯಾಪ್ತಿಯ ಸಂಪಾಜೆ ಗುಡ್ಡೆಗದ್ದೆಯಲ್ಲಿ ನಕ್ಸಲರು ಪ್ರತ್ಯಕ್ಷಗೊಂಡಿದ್ದರು.

Leave a Reply