Visitors have accessed this post 269 times.
ಸುರತ್ಕಲ್: ತಂದೆಯೊಂದಿಗೆ ಮೀನುಗಾರಿಕೆಗೆ ತೆರಳಿದ್ದ ವೇಳೆ ಬಾಲಕನೋರ್ವ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದು ಗುರುವಾರ ಸಂಜೆ ಮೃತಪಟ್ಟಿದ್ದಾನೆ.
ಮೃತ ಬಾಲಕನನ್ನು ತೋಟಬೆಂಗ್ರೆ ಮಿಥುನ್ ರವರ ಪುತ್ರ ಪ್ರಜೀತ್ (15) ಎಂದು ಗುರುತಿಸಲಾಗಿದೆ. ದೋಣಿಯಲ್ಲಿ ತೆರಳುತ್ತಿದ್ದಾಗ ಬಾಲಕ ನೀರಿಗೆ ಬಿದ್ದಿದ್ದಾನೆ.
ಮೀನುಗಾರರು ರಕ್ಷಣೆಗಾಗಿ ತತ್ ಕ್ಷಣ ಕಾರ್ಯಾಚರಣೆ ನಡೆಸಿದರೂ ತೆರೆಗಳ ನಡುವೆ ಸಿಲುಕಿದ್ದು ಪತ್ತೆ ಮಾಡುವಾಗ ಒಂದು ತಾಸು ವಿಳಂಬವಾಗಿದೆ. ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿ ಮೃತಪಟ್ಟಿದ್ದಾನೆ. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.