ಬಂಟ್ವಾಳ: ಟಿಪ್ಪರ್‌ಗಳಲ್ಲಿ ಅಕ್ರಮ ಮರಳು ಸಾಗಾಟ : ನಾಲ್ವರ ವಿರುದ್ಧ ಪ್ರಕರಣ ದಾಖಲು…!!

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪ ನರಿಕೊಂಬು ಗ್ರಾಮದ ನೆಹರೂ ನಗರದಲ್ಲಿ ಬೆಳಗ್ಗೆ ಬಂಟ್ವಾಳ ನಗರ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದ ವೇಳೆ 2 ಟಿಪ್ಪರ್‌ಗಳಲ್ಲಿ ಅಕ್ರಮ ಮರಳು ಸಾಗಾಟ ಪತ್ತೆಯಾಗಿದೆ‌‌. ಪ್ರಕರಣಕ್ಕೆ ಸಂಬಂಧಿಸಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಒಂದು ಟಿಪ್ಪರ್‌ನ ಮಾಲಕ ಹಾಗೂ ಚಾಲಕ ಕನ್ಯಾನ ನಿವಾಸಿ ಅಬ್ದುಲ್‌ ರಹಿಮಾನ್‌, ಮರಳು ಕಳವಿಗೆ ಸಹಕರಿಸಿದ ಅಡ್ಯಾರ್‌ ನಿವಾಸಿ ಮಹಮ್ಮದ್‌ ಸಾದಿಕ್‌, ಮತ್ತೊಂದು ಟಿಪ್ಪರ್‌ ಚಾಲಕ ವಿಟ್ಲಮುಟ್ನೂರು ನಿವಾಸಿ ಗೌತಮ್‌ ಹಾಗೂ ಮಾಲಕ ವೀರಕಂಭ ನಿವಾಸಿ ಗುಡ್ಡಪ್ಪ ಗೌಡ ಪ್ರಕರಣದ ಆರೋಪಿಗಳಾಗಿದ್ದಾರೆ.
ನಗರ ಠಾಣಾ ಪಿಎಸ್‌ಐ ರಾಮಕೃಷ್ಣ ಅವರು ಸಿಬಂದಿಯೊಂದಿಗೆ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ 2 ಟಿಪ್ಪರ್‌ಗಳಲ್ಲಿ ಅಕ್ರಮ ಮರಳುಗಾರಿಕೆ ಪತ್ತೆಯಾಗಿದೆ. ಈ ಕುರಿತು ಚಾಲಕರಲ್ಲಿ ವಿಚಾರಿಸಿದಾಗ ವಳಚ್ಚಿಲ್‌ ನೇತ್ರಾವತಿ ನದಿಯಿಂದ ಅನುಮತಿ ಇಲ್ಲದೆ ಅಕ್ರಮವಾಗಿ ಮರಳು ಸಾಗಿಸುತ್ತಿರುವುದಾಗಿ ತಿಳಿಸಿದ್ದಾರೆ.
ಘಟನೆಯಲ್ಲಿ ಲಾರಿಗಳನ್ನು ಮರಳು ಸಹಿತ ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply