Visitors have accessed this post 479 times.
ಪುತ್ತೂರು: ಆರು ವರ್ಷಗಳ ಹಿಂದೆ 12 ವರ್ಷದಿ ಬಾಲಕನ ಮೇಲೆ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ ಪ್ರಕರಣದ ಅಪರಾಧಿ ಪೆರ್ನೆಯ ಚಾರ್ಲಿ ಮಿನೇಜಸ್ ಗೆ ಪುತ್ತೂರು ನ್ಯಾಯಾಲಯವು 1 ವರ್ಷ 6 ತಿಂಗಳ ಕಾರಾಗೃಹ ವಾಸ ಹಾಗೂ 3,000 ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
2018ರಲ್ಲಿ ಆರೋಪಿ ಚಾರ್ಲಿ ಮಿನೇಜಸ್ ತನ್ನ ತಮ್ಮನ ಮಗನಾದ 12ರ ಹರೆಯದ ಬಾಲಕನ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ್ದು, ಇದರ ಪರಿಣಾಮ ಬಾಲಕನ ತಲೆ, ಎಡಕಿವಿ, ಬೆನ್ನಿನ ಬಾಗಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರು ನ್ಯಾಯಾಲಯದ ನ್ಯಾಯಾಧೀಶರಾದ ಶಿವಣ್ಣ ಅವರು ಆರೋಪಿಗೆ ಒಂದು ವರ್ಷ ಆರು ತಿಂಗಳ ಕಾರಾಗೃಹ ಶಿಕ್ಷೆ ಘೋಷಿಸಿ, ಮೂರು ಸಾವಿರ ರೂ. ದಂಡವನ್ನೂ ವಿಧಿಸಿ ಆದೇಶ ಹೊರಡಿಸಿದ್ದಾರೆ. ಸದ್ರಿ ಪ್ರಕರಣದಲ್ಲಿ ಸರಕಾರಿ ಸಹಾಯಕ ಅಭಿಯೋಜಕಿ ಕವಿತಾ ವಾದ ಮಂಡಿಸಿದ್ದರು.