ಸುರತ್ಕಲ್‌: ಸ್ಕೂಟರ್ ಮತ್ತು ಜೀಪ್ ಡಿಕ್ಕಿ- ಇಬ್ಬರು ಸಾವು

ಸುರತ್ಕಲ್‌:  ಹೊಟೇಲ್‌ ಸೂರಜ್‌ ಬಳಿ ರಸ್ತೆ ದಾಟುತ್ತಿದ್ದ ದ್ವಿಚಕ್ರ ವಾಹನಕ್ಕೆ ಜೀಪೊಂದು ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್‌ ಸವಾರರಿಬ್ಬರೂ ಮೃತಪಟ್ಟ ಘಟನೆ ಸಂಭವಿಸಿದೆ ‌
ಮೃತಪಟ್ಟವರು ಬೀಡಿ ಗುತ್ತಿಗೆದಾರ ನೋಣಯ್ಯ (64), ಸಹಸವಾರ ನಿಯಾಜ್‌ (34) ಎಂದು ತಿಳಿಯಲಾಗಿದೆ ‌
ಕುಳಾಯಿ ಪ್ರಗತಿ ನಗರ ನಿವಾಸಿ ನೋಣಯ್ಯ ಅವರು ಸುಮಾರು ಮೂವತ್ತು ವರ್ಷಗಳಿಂದ ಬೀಡಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು.
ಎಂದಿನಂತೆ ಕೆಲಸದ ನಿಮಿತ್ತ ತನ್ನ ಜತೆ ಕೆಲಸ ಮಾಡುವ ಕಾನ ನಿವಾಸಿ ನಿಯಾಜ್‌ ಜತೆ ಸ್ಕೂಟರ್‌ನಲ್ಲಿ ಮುಕ್ಕದಿಂದ ಬಂದವರು ಹೊಟೇಲ್‌ ಬಳಿ ಯೂ ಟರ್ನ್ ಮಾಡುತ್ತಿದ್ದ ವೇಳೆ ಜೀಪ್‌ ಢಿಕ್ಕಿ ಹೊಡೆಯಿತು.
ಢಿಕ್ಕಿ ಹೊಡೆದ ರಭಸಕ್ಕೆ ಇಬ್ಬರ ಮೇಲೆ ಜೀಪ್‌ ಚಕ್ರ ಹರಿದು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ಸುರತ್ಕಲ್‌ ಉತ್ತರ ಸಂಚಾರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply