ಮಂಗಳೂರು: ಪದ್ಮರಾಜ್ ಗೆಲ್ತಾರೆ – ಮಾಜಿ ಸಚಿವ ಜನಾರ್ದನ ಪೂಜಾರಿ

ಮಂಗಳೂರು: ದ‌.ಕ.ಜಿಲ್ಲಾ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಅವರು ಮುಂಬರುವ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಸಚಿವ ಜನಾರ್ದನ ಪೂಜಾರಿ ಭವಿಷ್ಯ ನುಡಿದರು. ನಗರದ ಲಾಲ್ ಬಾಗ್ ನಲ್ಲಿ ಕಾಂಗ್ರೆಸ್ ಚುನಾವಣಾ ಕಚೇರಿ ಉದ್ಘಾಟಿಸಿ ಬಳಿಕ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಸಂದರ್ಭ ಅವರು ತಮ್ಮ ಶಿಷ್ಯನ ಗೆಲುವಿನ ಬಗ್ಗೆ ಭವಿಷ್ಯ ನುಡಿದರು. ಪದ್ಮರಾಜ್ ಆರ್. ಅವರು ಗೆಲ್ತಾರೆ. ಅವರು ಗೆಲ್ಲೋದು ಗ್ಯಾರಂಟಿ. ಈ ಬಗ್ಗೆ ಯಾವ ಸಂಶಯವೂ ಬೇಡ. ಅವರ ಮಾತನ್ನು ಕೇಳಿದ್ದೀರಿ ಅವರು ಅಹಂಕಾರಿಯಲ್ಲ. ಮುಂದೆ ಎಲ್ಲವೂ ದೇವರ ಕೈಯಲ್ಲಿದೆ. ದೇವರು ನಮ್ಮ ಹಿಂದೆಯೇ ಇದ್ದಾನೆ. ಅವನು ನೋಡ್ತಾ ಇದ್ದಾನೆ. ಖಂಡಿತವಾಗಿ ಪದ್ಮರಾಜ್ ಗೆಲ್ತಾರೆ ಎಂದು ಹೇಳಿದರು.

Leave a Reply