ಕಾಸರಗೋಡು: ರೈಲಿನಿಂದ ಬಿದ್ದು ಒಡಿಸ್ಸಾ ಮೂಲದ ವ್ಯಕ್ತಿ ಮೃತ್ಯು

ಕಾಸರಗೋಡು: ರೈಲಿನಿಂದ ಬಿದ್ದು ಒಡಿಸ್ಸಾ ನಿವಾಸಿಯೋರ್ವರು ಮೃತಪಟ್ಟ ದಾರುಣ ಘಟನೆ ಗುರುವಾರ ಮಧ್ಯಾಹ್ನ ಕಾಸರಗೋಡು ರೈಲು ನಿಲ್ದಾಣದಲ್ಲಿ ನಡೆದಿದೆ.

ಒಡಿಸ್ಸಾದ ಸುಶಾಂತ್ ( 41) ಮೃತಪಟ್ಟವರು. ಮಂಗಳೂರಿನ ಪೆಟ್ರೋಲ್ ಬಂಕ್ ನೌಕರರಾಗಿದ್ದರು. ಮಂಗಳೂರಿನಿಂದ ಚೆನ್ನೈಗೆ ತೆರಳುತ್ತಿದ್ದ ರೈಲಿನಲ್ಲಿ ಈ ಘಟನೆ ನಡೆದಿದೆ.

ಕಾಸರಗೋಡು ರೈಲು ನಿಲ್ದಾಣದಲ್ಲಿ ಕುಡಿಯುವ ನೀರು ಖರೀದಿಸಲು ಇಳಿದಿದ್ದು ಸಂದರ್ಭದಲ್ಲಿ ರೈಲು ಮುಂದಕ್ಕೆ ಚಲಿಸಿದೆ. ಇದರಿಂದ ಓಡಿ ರೈಲಿಗೆ ಹತ್ತಲು ಯತ್ನಿಸಿದಾಗ ರೈಲು ಹಳಿ ಮತ್ತು ಫ್ಲ್ಯಾಟ್ ಫಾಮ್ ನಡುವೆ ಸಿಲುಕಿದ್ದು , ಸ್ಥಳದಲ್ಲೇ ಮೃತಪಟ್ಟಿದ್ದಾರೆ .

ಮೃತದೇಹದಿಂದ ಲಭಿಸಿದ ಪಾನ್ ಕಾರ್ಡ್ ನಿಂದ ಗುರುತು ಪತ್ತೆ ಹಚ್ಚಲಾಗಿದೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ

Leave a Reply