Visitors have accessed this post 976 times.
ಸ್ಯಾಂಡಲ್ ವುಡ್ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅಕಾಲಿಕ ನಿಧನಹೊಂದಿದ್ದರು. ಅವರ ನಿಧನದ ಬಳಿಕ, ಈಗ ನಟ ವಿಜಯ್ ರಾಘವೇಂದ್ರ ಪತ್ನಿಯ ಮಾವ ಅಪಘಾತದಲ್ಲಿ ನಿಧನರಾಗಿ, ಮತ್ತೊಂದು ಆಘಾತ ಎದುರಾಗಿದೆ.
ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಅವರ ಮಾವ ಹೇರಾಜೆ ಶೇಖರ ಬಂಗೇರ ಅವರು ಅಪಘಾತದಲ್ಲಿ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.
ಬೆಳ್ತಂಗಡಿ ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂ ಅವರ ತಾಯಿಯ ಅಣ್ಣ ಶೇಖರ ಬಂಗೇರ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಸಂತೆಕಟ್ಟೆಯಲ್ಲಿ ರಾತ್ರಿ ನಡೆದಂತ ಅಪಘಾತದಲ್ಲಿ ನಿಧನರಾಗಿರೋದಾಗಿ ತಿಳಿದು ಬಂದಿದೆ.
ಅಂದಹಾಗೆ ಶೇಖರ್ ಅವರ ಬೈಕ್ ಗೆ ಮತ್ತೊಂದು ಬೈಕ್ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸೋ ವೇಳೆಯಲ್ಲಿ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಇನ್ನೂ ಬೈಕ್ ಅಪಘಾತದಲ್ಲಿ ಗಾಯಗೊಂಡಿರುವಂತ ಯುವತಿ ಸ್ಥಿತಿ ಕೂಡ ಗಂಭೀರಗೊಂಡಿರೋದಾಗಿ ಹೇಳಲಾಗುತ್ತಿದೆ.