November 8, 2025
WhatsApp Image 2024-03-31 at 5.38.57 PM

ತ್ತೀಚಿನ ಜನರು ಸ್ಮಾರ್ಟ್ ಫೋನ್ ಗಳಿಗೆ ವ್ಯಸನಿಯಾಗುತ್ತಿದ್ದಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಜನರು ನೈಜ ಪ್ರಪಂಚದೊಂದಿಗೆ ಸಂವಹನ ನಡೆಸುವ ಬದಲು ತಮ್ಮ ಫೋನ್ ಗಳಲ್ಲಿ ಮಗ್ನರಾಗಿ ಸಮಯ ಕಳೆಯುತ್ತಿದ್ದಾರೆ.ಫೋನ್ ಕರೆಯಲ್ಲಿ ನಿರತರಾಗಿರುವ ಮಹಿಳೆಯೊಬ್ಬಳು ತನ್ನ ಪುಟ್ಟ ಮಗುವನ್ನು ಫ್ರಿಡ್ಜ್ ನಲ್ಲಿಟ್ಟ ಘಟನೆ ನಡೆದಿದೆ.

 

ವಿಡಿಯೋದಲ್ಲಿ ಏನಿದೆ..

ಅಂಬೆಗಾಲಿಡುವ ಮಗುವೊಂದು ತನ್ನ ತಾಯಿ ಜೊತೆ ಆಟವಾಡುತ್ತಾ ಇರುತ್ತದೆ. ತಾಯಿಗೆ ಫೋನ್ ಬಂದ ಕೂಡಲೇ ತಾಯಿಯ ಗಮನ ಬೇರೆಕಡೆ ಹೋಗುತ್ತದೆ. ಮೊಬೈಲ್ ನಲ್ಲಿ ಮಾತನಾಡುತ್ತಾ ಮಾತನಾಡುತ್ತಾ ತರಕಾರಿ ಹೆಚ್ಚುತ್ತಾಳೆ. ನಂತರ ಫೋನ್ ನಲ್ಲಿ ಮಾತನಾಡುತ್ತಾ ಮಾತನಾಡುತ್ತಾ ಮಗುವನ್ನು ಎತ್ತಿ ಫ್ರಿಡ್ಜ್ ನಲ್ಲಿ ಇಟ್ಟಿದ್ದಾಳೆ. ನಂತರ ಮತ್ತೆ ತನ್ನ ಮಾತು ಮುಂದುವರೆಸುತ್ತಾಳೆ. ಗಂಡ ಬಂದು ಮಗು ಎಲ್ಲಿ ಎಂದು ಕೇಳಿದಾಗ…ಈಕೆ ಶಾಕ್ ಆಗಿ ಹುಡುಕುತ್ತಾಳೆ. ಬಳಿಕ ಗಂಡ ಫ್ರಿಡ್ಜ್ ತೆರೆದು ನೋಡಿದಾಗ..ಒಂದು ಕ್ಷಣ ಶಾಕ್ ಆಗುತ್ತಾನೆ..ತಾಯಿ ಮಾತನಾಡುವ ಭರದಲ್ಲಿ ಮಗುವನ್ನು ಎತ್ತಿ ಫ್ರಿಡ್ಜ್ ನಲ್ಲಿ ಹಾಕಿರುತ್ತಾಳೆ. ಇದೆಲ್ಲವನ್ನೂ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಲಾದ ಟೈಮ್-ಲಾಪ್ಸ್ ವೀಡಿಯೊದಲ್ಲಿ ತೋರಿಸಲಾಗಿದೆ. ವೀಡಿಯೊವನ್ನು ಪ್ರದರ್ಶಿಸಲಾಗಿದೆ ಎಂದು ಹೇಳಲಾಗುತ್ತಿದೆ.

About The Author

Leave a Reply