Visitors have accessed this post 560 times.

ಹಜ್ ಯಾತ್ರೆಗೆ ತೆರಳಿದ್ದ ಒಂದೇ ಕುಟುಂಬದ ಮೂವರು ಅಪಘಾತದಲ್ಲಿ ದುರ್ಮರಣ..!

Visitors have accessed this post 560 times.

ವಿದೇಶದಲ್ಲಿರುವಂತ ಹಜ್ ಯಾತ್ರೆಗೆ ತೆರಳಿದ್ದಂತ ಉತ್ತರ ಕನ್ನಡ ಜಿಲ್ಲೆಯ ಒಂದೇ ಕುಟುಂಬದ ಮೂವರು ಅಪಘಾತದಲ್ಲಿ ದುರ್ಮರಣ ಹೊಂದಿರುವಂತ ಘಟನೆ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಅಫಾಗ್ ಫಯಾಸ್ ರೋಣ, ಪತ್ನಿ ಅಫ್ರಿನಾ ಬಾನು ಹಾಗೂ ಅಣ್ಣನ ಮಗ ಅಯಾನ್ ರೋಣ ಎಂಬುವರು ಹಜ್ ಯಾತ್ರೆ ಮುಗಿಸಿ ಮಕ್ಕಾದಿಂದ ಹಿಂದಿರುಗುತ್ತಿದ್ದಾಗ ವಿದೇಶದಲ್ಲಿ ನಡೆದಂತ ಅಪಘಾತದಲ್ಲಿ ಸ್ಥಳದಲ್ಲೇ ದುರ್ಮರಣ ಹೊಂದಿರೋದ್ದಾರೆ.

ಇಬ್ಬರು ಮಕ್ಕಳು ಸೇರಿದಂತೆ ಮೂವರು ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಾರ್ಚ್.26ರಂದು ರಾತ್ರಿ ಮಕ್ಕಾ ಮದೀನಕ್ಕೆ ತೆರಳಿದ್ದರು. ಏಪ್ರಿಲ್.6ರ ನಿನ್ನೆ ರಾತ್ರಿ ಮಕ್ಕಾ ಮದೀನ ನಡುವಿನ ರಸ್ತೆಯಲ್ಲಿ ಅಪಘಾತದಲ್ಲಿ ದಂಪತಿ ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Leave a Reply

Your email address will not be published. Required fields are marked *