ತನ್ನ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ್ದ ಜೈಲು ಸೇರಿದ್ದ ಆರೋಪಿ ತಾಯಿ ಗಂಗಾದೇವಿ ಜೈಲಿಗೆ ಹೋದ ದಿನವೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಕ್ಕಳಾದ ಲಕ್ಷ್ಮಿ (9) ಹಾಗೂ ಗೌತಮ್ (7) ಹಾಗೂ ಗಂಗಾದೇವಿ ಎಂದು ಗುರುತಿಸಲಾಗಿದೆ. ಬೆಂಗಳೂರಿನ ಜಾಲಹಳ್ಳಿಯಲ್ಲಿ ಮಕ್ಕಳನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ ಗಂಗಾದೇವಿಯನ್ನ ಪೊಲೀಸರು ಬಂಧಿಸಿದ್ದಾರೆ. ಜಾಲಹಳ್ಳಿ ಪೊಲೀಸರು ಆರೋಪಿತೆ ಗಂಗಾದೇವಿಯನ್ನ ಅರೆಸ್ಟ್ ಮಾಡಿದ್ದಾರೆ. ಮಕ್ಕಳಾದ ಲಕ್ಷ್ಮಿ (9) ಹಾಗೂ ಗೌತಮ್ (7) ನನ್ನು ತಾಯಿ ಗಂಗಾದೇವಿ ಕೊಲೆ ಮಾಡಿದ್ದಳು. ಕೊಲೆ ಪ್ರಕರಣದ ಆರೋಪಿ ಗಂಗಾದೇವಿ ಪತಿಯೂ ಕೂಡ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣದ ಪೊಕ್ಸೊ ಕೇಸ್‌ನಲ್ಲಿ ಬಂಧಿತನಾಗಿ ಜೈಲಿನಲ್ಲಿದ್ದಾನೆ. ಆರೋಪಿತೆ ಗಂಗಾದೇವಿ ಖಾಸಗಿ ಕಂಪನಿಯಲ್ಲಿ ಮಾರ್ಕೆಟಿಂಗ್ ಕೆಲಸ ಮಾಡುತ್ತಿದ್ದರು. ಗುರುವಾರ ಪರಪ್ಪನ ಅಗ್ರಹಾರಕ್ಕೆ ಗಂಗಾದೇವಿಯನ್ನು ಬಿಡಲಾಗಿತ್ತು. ಅದೇ ದಿನ ರಾತ್ರಿ ಜೈಲಿನಲ್ಲಿನ ಶೌಚಾಲಯದಲ್ಲಿ ತಾನು ಧರಿಸಿದ್ದ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಸ್ಪತ್ರೆಗೆ ಸಾಗಿಸುತ್ತಿದ್ದ ಮಧ್ಯೆ ಗಂಗಾದೇವಿ ಸಾವನ್ನಪ್ಪಿದ್ದಾಳೆ. ಇಂದು ಮರಣೋತ್ತರ ಪರೀಕ್ಷೆ ಮಾಡಿ ಸಂಬಂಧಿಕರಿಗೆ ಮೃತದೇಹ ಹಸ್ತಾಂತರಿಸಲಾಗಿದೆ. ಈ ಕುರಿತು ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.