ಬೋರ್ನ್ವಿಟಾವನ್ನು ‘ಆರೋಗ್ಯ’ ಪಾನೀಯ ವರ್ಗದಿಂದ ತೆಗೆದು ಹಾಕಲು ಇ – ಕಾಮರ್ಸ್ ಕಂಪನಿಗಳಿಗೆ ಸೂಚನೆ
ನವದೆಹಲಿ : ಮಕ್ಕಳಿಗೆ ಕುಡಿಸುವ ಬೋರ್ನ್ ವಿಟಾ ಇನ್ನು ಮುಂದೆ ಹೆಲ್ತ್ ಡ್ರಿಂಕ್ಸ್ ವರ್ಗದಿಂದ ತೆಗೆದು ಹಾಕುವಂತೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಇ-ಕಾಮರ್ಸ್ ಕಂಪನಿಗಳಿಗೆ ಸಲಹೆ ನೀಡಿದೆ. ಪೋರ್ಟಲ್ ಮತ್ತು ಪ್ಲಾಟ್‍ಫಾರ್ಮ್‍ಗಳಲ್ಲಿ ಬೋರ್ನ್‍ವಿಟಾ ಸೇರಿದಂತೆ ಎಲ್ಲಾ ಪಾನೀಯಗಳು ಈ ವರ್ಗದಿಂದ ಕೈಬಿಡುವಂತೆ ಆದೇಶ ನೀಡಲಾಗಿದೆ.
ಕಾರಣ ಏನು…
ಒಬ್ಬ ಯುಟ್ಯೂಬರ್ ಬೋರ್ನ್ ವೀಟಾದಲ್ಲಿ ಹೆಚ್ಚಿನ ಪ್ರಮಾಣ ಸಕ್ಕರೆ ಅಂಶ ಇರುವ ಬಗ್ಗೆ ವಿಡಿಯೋ ಮಾಡಿದ್ದ, ಅಲ್ಲದೆ ಪ್ರಯೋಗ ಮೂಲಕ ಆತ ಅದನ್ನು ತೋರಿಸಿದ್ದ. ಇದರ ಬೆನ್ನಲ್ಲೇ ಇದೀಗ ಕೇಂದ್ರ ಸರಕಾರ ನ್ಯಾಷನಲ್ ಕಮಿಷನ್ ಫಾರ್ ಪ್ರೊಟೆಕ್ಷನ್ ಆಫ್ ಚೈಲ್ಡ್ ರೈಟ್ಸ್‌ನ ತನಿಖೆಯಯಲ್ಲಿ ಬೋರ್ನ್‍ವಿಟಾ ಹೆಚ್ಚಿನ ಸಕ್ಕರೆ ಮಟ್ಟವನ್ನು ಹೊಂದಿದೆ ಎಂದು ತಿಳಿದುಬಂದಿದೆ. ಇದು ಸ್ವೀಕಾರಾರ್ಹ ಮಿತಿಗಳಿಗಿಂತ ಹೆಚ್ಚು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕಂಪನಿಗಳು ಸುರಕ್ಷತಾ ಮಾನದಂಡಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸಲು ವಿಫಲವಾಗಿವೆ. ಅಲ್ಲದೇ ಆರೋಗ್ಯಕರ ಪಾನೀಯಗಳು ಎಂದು ಬಿಂಬಿಸುತ್ತಿರುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಎನ್‍ಸಿಪಿಸಿಆರ್, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ (FSSAI) ಸೂಚಿಸಿತ್ತು.