ಗಮನಿಸಿ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಮಂಗಳೂರು: ಮಂಗಳೂರಿನ ನೇತ್ರಾವತಿ ಕ್ಯಾಬಿನ್‌ ಮತ್ತು ಮಂಗಳೂರು ಜಂಕ್ಷನ್‌ ಸ್ಟೇಷನ್‌ ಮಧ್ಯೆ ಹಳಿ ನಿರ್ವಹಣ ಕಾಮಗಾರಿ ಇರುವುದರಿಂದ ಕೆಲವೊಂದು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.

ನಂ. 16649 ಮಂಗಳೂರು ಸೆಂಟ್ರಲ್‌ ನಾಗರಕೋವಿಲ್‌ ಪರಶುರಾಮ ಎಕ್ಸ್‌ಪ್ರೆಸ್‌ ಮೇ 3 ಮತ್ತು 5ರಂದು ಬೆಳಗ್ಗೆ ಮಂಗಳೂರು ಸೆಂಟ್ರಲ್‌ನಿಂದ 5.05ರ ಬದಲು 30 ನಿಮಿಷ ತಡವಾಗಿ 5.35ಕ್ಕೆ ನಿರ್ಗಮಿಸುವುದು.

ನಂ.16610 ಮಂಗಳೂರು ಸೆಂಟ್ರಲ್‌ ಕೋಯಿಕ್ಕೋಡ್‌ ಎಕ್ಸ್‌ಪ್ರೆಸ್‌ ಮೇ 3, 5ರಂದು ಮಂಗಳೂರು ಸೆಂಟ್ರಲ್‌ನಿಂದ ನಿಗದಿತ 5.45ರ ಬದಲು ಅದೇದಿನ 5.45ಕ್ಕೆ 30 ನಿಮಿಷ ತಡವಾಗಿ ತೆರಳುವುದು.

ನಂ. 16649 ಮಂಗಳೂರು ಸೆಂಟ್ರಲ್‌ ನಾಗರಕೋವಿಲ್‌ ಪರಶುರಾಮ ಎಕ್ಸ್‌ಪ್ರೆಸ್‌ ರೈಲು ಮೇ 8ರಂದು ಬೆಳಗ್ಗೆ ಮಂಗಳೂರು ಸೆಂಟ್ರಲ್‌ನಿಂದ 5.05ರ ಬದಲು 1.30 ಗಂಟೆ ತಡವಾಗಿ 6.35ಕ್ಕೆ ನಿರ್ಗಮಿಸುವುದು.

ನಂ. 22638 ವೆಸ್ಟ್‌ಕೋಸ್ಟ್‌ ಎಕ್ಸ್‌ಪ್ರೆಸ್‌ ಮೇ 7ರಂದು ಮಂಗಳೂರು ಸೆಂಟ್ರಲ್‌ನಿಂದ ರಾತ್ರಿ 11.45ರ ಬದಲು ಮೇ 8ರ 00.15 ಗಂಟೆಗೆ ಉಳ್ಳಾಲ ನಿಲ್ದಾಣದಿಂದ ಹೊರಡಲಿದೆ. ಮಂಗಳೂರು ಸೆಂಟ್ರಲ್‌ ಉಳ್ಳಾಲ ಮಧ್ಯೆ ಸೇವೆ ರದ್ದಾಗಿದೆ.
ನಂ. 16610 ಮಂಗಳೂರು ಸೆಂಟ್ರಲ್‌ ಕೋಯಿಕ್ಕೋಡ್‌ ಎಕ್ಸ್‌ಪ್ರೆಸ್‌ ಮೇ 8ರಂದು ಬೆಳಗ್ಗೆ 5.15ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ಬದಲಿಗೆ ಉಳ್ಳಾಲ ನಿಲ್ದಾಣದಿಂದ 5.45ಕ್ಕೆ ಹೊರಡಲಿದೆ.

ನಂ. 16345 ಲೋಕಮಾನ್ಯ ತಿಲಕ್‌ ತಿರುವನಂತಪುರಂ ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲನ್ನು ಮೇ 2ರಂದು 50 ನಿಮಿಷ, ನಂ.16312 ಕೊಚ್ಚುವೇಲಿ ಗಂಗಾನಗರ ರೈಲನ್ನು ಮೇ 4ರಂದು 2.20 ಗಂಟೆ ಕಾಲ, ನಂ.01464 ಕೊಚುವೇಲಿ ಲೋಕಮಾನ್ಯ ತಿಲಕ್‌ ರೈಲನ್ನು ಮೇ 4ರಂದು 2.10 ಗಂಟೆ, ನಂ. 22637 ವೆಸ್ಟ್‌ಕೋಸ್ಟ್‌ಎಕ್ಸ್‌ಪ್ರೆಸ್ಸನ್ನು ಮೇ 4ರಂದು 20 ನಿಮಿಷ ಕಾಲ, ಇದೇ ರೈಲನ್ನು ಮೇ 7ರಂದು 1.10 ಗಂಟೆ, ನಂ.1633ರ ನಾಗರಕೋವಿಲ್‌ ಗಾಂಧಿಧಾಮ ವೀಕ್ಲಿ ಎಕ್ಸ್‌ಪ್ರೆಸ್‌ ರೈಲನ್ನು ಮೇ 7ರಂದು 2.40 ಗಂಟೆ ನಂ. 12431 ತಿರುವನಂತಪುರಂ ಸೆಂಟ್ರಲ್‌ ಹ.ನಿಜಾಮುದ್ದೀನ್‌ ರಾಜಧಾನಿ ಎಕ್ಸ್‌ಪ್ರೆಸ್ಸನ್ನು ಮೇ 7ರಂದು 1.10 ಗಂಟೆ ಕಾಲ, ನಂ.12283 ಎರ್ನಾಕುಳಂ ಹಝತ್‌ ನಿಜಾಮುದ್ದೀನ್‌ ದುರಂತೊ ಎಕ್ಸ್‌ಪ್ರೆಸ್ಸನ್ನು ಮೇ 7ರಂದು 1.10 ಗಂಟೆ ಕಾಲ ತಡೆಹಿಡಿಯಲಾಗುವುದು ಎಂದು ದಕ್ಷಿಣ ರೈಲ್ವೇ ಪ್ರಕಟನೆ ತಿಳಿಸಿದೆ.

Leave a Reply