October 22, 2025
WhatsApp Image 2024-05-11 at 4.13.08 PM

 

ಮಂಗಳೂರು: ಭಾರತದ ಜನಸಂಖ್ಯೆಯನ್ನು ಸೂಚಿಸುವ ತನ್ನ ಟಿ.ವಿ.ಕಾರ್ಯಕ್ರಮದಲ್ಲಿ ಸುವರ್ಣ ನ್ಯೂಸ್ ಅಜಿತ್ ಹನುಮಕ್ಕನವರ್, ಭಾರತದ ಹಿಂದೂಗಳ ಜನಸಂಖ್ಯೆಯನ್ನು ಭಾರತದ ಧ್ವಜದ ಅಡಿಯಲ್ಲಿ ಮತ್ತು ಮುಸ್ಲಿಮರ ಜನ ಸಂಖ್ಯೆಯನ್ನು ಪಾಕಿಸ್ತಾನದ ಧ್ವಜದ ಅಡಿಯಲ್ಲಿ ಪ್ರದರ್ಶಿಸಿ ತನ್ನ ದೇಶ ದ್ರೋಹಿತ್ವ ವನ್ನು ಸಾಬೀತು ಪಡಿಸಿದ್ದಾರೆ.

ಈ ದೇಶದ ಸರ್ವ ಪ್ರಜೆಗಳ ಜನಸಂಖ್ಯಾ ಅನುಪಾತದ ಅಂಕಿ ಅಂಶಗಳನ್ನು ಆಯಾ ಜನರ ಸಾಂಕೇತಿಕ ಪೋಷಾಕು ಅಥವಾ ಧಾರ್ಮಿಕ ಸಂಕೇತಗಳ ಮೂಲಕ ಪ್ರಕಟಿಸುವುದು ವಾಡಿಕೆ. ಆದರೆ ಅಜಿತ್ ಹನುಮಕ್ಕನವರ್ ಎಂಬ ವೈದಿಕ ಕೋಮು ಕ್ರಿಮಿ ಉಭಯ ದೇಶಗಳ ದ್ವಜವನ್ನು ಪ್ರದರ್ಶಿಸುವ ಮೂಲಕ ದೇಶದ ಭದ್ರತೆಗೆ ಸವಾಲಾಗುವ ರೀತಿಯಲ್ಲಿ ವೀಕ್ಷಕರನ್ನು ತಪ್ಪು ದಾರಿಗೆ ಎಳೆಯಲು ಪ್ರಯತ್ನಿಸಿರುವುದು ಖಂಡನೀಯ.
ಚುನಾವಣೆಯಲ್ಲಿ ಹೀನಾಯ ಸೋಲು ನಿರೀಕ್ಷಿಸುತ್ತಿರುವ ಪ್ರದಾನಿ ಮೋದಿ ನೇತೃತ್ವದ ಬಿಜೆಪಿ ಚುನಾವಣೆ ಸಮಯದಲ್ಲಿ ಪ್ರಧಾನ ಮಂತ್ರಿ ಕಚೇರಿಯ ಮೂಲಕ ದೇಶದ ಜನಸಂಖ್ಯೆ ಅಂಕಿ ಅಂಶಗಳನ್ನು ಬಿಡುಗಡೆ ಗೊಳಿಸಿ ಅದನ್ನು ವ್ಯಾಪಕವಾಗಿ ಮಾಧ್ಯಮದ ಮೂಲಕ ತಪ್ಪಾಗಿ ಬಿಂಬಿಸುವ ಹೇಯ ಕೃತ್ಯಕ್ಕೆ ಇಳಿದಿರುವುದು ಖೇದಕರ. ಈ ದೇಶದ ಯಾವ ಪ್ರಧಾನಿಯೂ ಇಂತಹ ನೀಚ ರಾಜಕೀಯ ಮಾಡಿರಲಿಲ್ಲ. ಅದರ ಭಾಗವಾಗಿ ಸುವರ್ಣ ನ್ಯೂಸ್ ಅಜಿತ್ ಹನುಮಕ್ಕನವರ್ ಜನಸಂಖ್ಯೆಯನ್ನು ಧ್ವಜಗಳ ಅಡಿಯಲ್ಲಿ ವಿಭಜಿಸಿ ಪ್ರದರ್ಶಿಸಿದ ಈ ಕೃತ್ಯ ಅವರ ದೇಶ ದ್ರೋಹಿತ್ವವನ್ನು ಸಾಬೀತು ಪಡಿಸುತ್ತದೆ, ಅಜಿತ್ ನ ವಿರುದ್ಧ ದೇಶ ದ್ರೋಹದ ಪ್ರಕರಣ ದಾಖಲು ಆಗಬೇಕಿದೆ.

ಕೆ.ಅಶ್ರಫ್( ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ

About The Author

Leave a Reply