May 1, 2026
WhatsApp Image 2024-05-11 at 9.27.23 AM

ಕೊಡಗು : ನಿಶ್ಚಿತಾರ್ಥ ಕ್ಯಾನ್ಸಲ್ ಆದ ಕೋಪದಲ್ಲಿ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿಯ ಹತ್ಯೆ ಮಾಡಿ ಆಕೆಯ ತಲೆ ಕೊಂಡೊಯ್ದಿದ್ದ ಆರೋಪಿಯ ನೇಣಿಗೆ ಶರಣಾಗಿದ್ದಾನೆ ಎಂದು ಸುದ್ದಿಯಾಗಿತ್ತು . ಆದರೆ ಬಳಿಕ ಪೊಲೀಸರು ಮಾಹಿತಿ ನೀಡಿದ್ದು, ಯಾವುದೇ ರೀತಿ ಘಟನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಪ್ರಾಪ್ತ ಬಾಲಕಿ ಮೀನಾ ಜೊತೆ ನಿಶ್ಚಿತಾರ್ಥವಾಗಲು ಹೋಗಿ ಕೊನೆಗೆ ಅಧಿಕಾರಿಗಳ ಮಧ್ಯಪ್ರವೇಶದಿಂದ ನಿಶ್ಚಿತಾರ್ಥ ಕ್ಯಾನ್ಸಲ್ ಆಗಿತ್ತು. ಇದೇ ಸಿಟ್ಟಲ್ಲಿ ಓಂಕಾರಪ್ಪ ವಿಧ್ಯಾರ್ಥಿನಿಯ ಮನೆಗೆ ತೆರಳಿ ಆರೋಪಿ ಆಕೆಯ ಮನೆಗೆ ಬಂದು ಪೋಷಕರ ಎದುರೇ ಎಳೆದುಕೊಂಡು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಮಚ್ಚಿನಿಂದ ತಲೆ ಕತ್ತರಿಸಿ ರುಂಡ-ಮುಂಡ ಬೇರ್ಪಡಿಸಿ ವಿಕೃತಿ ಮೆರೆದು ಪರಾರಿಯಾಗಿದ್ದನು.

ವಿದ್ಯಾರ್ಥಿನಿ ಮೀನಾ ಹತ್ಯೆ ಮಾಡಿದ ನಂತರ ಆಕೆಯ ತಲೆಯನ್ನು ಪ್ರಕಾಶ್ ಕೊಂಡೊಯ್ದಿದ್ದನು. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ಪತ್ತೆಯಾಗಿ ಶೋಧಕಾರ್ಯ ಆರಂಭಿಸಿತ್ತು. ಆದರೆ ವಿದ್ಯಾರ್ಥಿನಿಯ ರುಂಡ ಇನ್ನು ಪತ್ತೆಯಾಗಿಲ್ಲ.

About The Author

Leave a Reply