October 24, 2025
WhatsApp Image 2024-05-14 at 8.55.37 PM

ಮಂಗಳೂರು: ಕಂಫರ್ಟ್-ಟೆಕ್ ಬ್ರಾಂಡ್ ದಿ ಸ್ಲೀಪ್ ಕಂಪೆನಿ (ಟಿಎಸ್‌ಸಿ) ಮಂಗಳೂರಿನಲ್ಲಿ ತನ್ನ ಮೊದಲ ಮಳಿಗೆಯನ್ನು ಆರಂಭಿಸಿದೆ. ಕಂಪೆನಿ ಸಿಒಒ ಕರಣ್ ಸಿಂಗ್ಲಾ ನೂತನ ಮಳಿಗೆಯನ್ನು ಉದ್ಘಾಟಿಸಿದರು.
ನಗರದ ಕೆಎಸ್ ರಾವ್ ರಸ್ತೆಯಲ್ಲಿರುವ ಸಿಟಿ ಸೆಂಟರ್ ಮಾಲ್‌ನಲ್ಲಿ ಸ್ಲೀಪ್ ಕಂಪೆನಿಯ ಹೊಸ ಮಳಿಗೆ ಕಾರ್ಯಾರಂಭ ಮಾಡಿದೆ. ಹೊಸ ಮಳಿಗೆಯು ಕರ್ನಾಟಕದಲ್ಲಿ ಕಂಪೆನಿಯ 15ನೇ ಮಳಿಗೆಯಾಗಿದೆ. ಕಂಪೆನಿ ಈಗಾಗಲೇ ಬೆಂಗಳೂರಿನಲ್ಲಿ 14 ಮಳಿಗೆಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ.
ಮಂಗಳೂರಿನ ಮಳಿಗೆಯಲ್ಲಿ ಗ್ರಾಹಕರ ವಿವಿಧ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಪೇಟೆಂಟ್ ಸ್ಮಾರ್ಟ್ಗ್ರಿಡ್ ಹಾಸಿಗೆಗಳು, ಸ್ಮಾರ್ಟ್ ರಿಕ್ಲೈನರ್ ಹಾಸಿಗೆಗಳು, ದಿಂಬುಗಳು, ಕಚೇರಿಯಲ್ಲಿ ಬಳಸಬಹುದಾದ ಕುರ್ಚಿಗಳು ಮತ್ತು ರಿಕ್ಲೈನರ್ ಸೋಫಾಗಳು ಸೇರಿದಂತೆ ವಿವಿಧ ಉತ್ಪನ್ನಗಳಿರಲಿವೆ. ಮಂಗಳೂರು ಮತ್ತು ಸುತ್ತಮುತ್ತಲ ಗ್ರಾಹಕರು ನಿಶ್ಚಿಂತೆಯಿಂದ ಗುಣಮಟ್ಟದ ನಿದ್ರೆ ಮಾಡುವಂತಾಗಬೇಕೆAಬ ಆಶಯವನ್ನು ಕಂಪೆನಿ ಹೊಂದಿದೆ.
ಪ್ರತಿ ರಾತ್ರಿ ಏಳು ಗಂಟೆಗಳ ಆರಾಮದಾಯಕ ನಿದ್ರೆ ಅಗತ್ಯ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ ಕಳೆದ ಒಂದು ವರ್ಷದಲ್ಲಿ, ಕರ್ನಾಟಕದಲ್ಲಿ ಸರ್ಕಾರ ನಡೆಸುತ್ತಿರುವ ಟೆಲಿ-ಮೆಂಟಲ್ ಆರೋಗ್ಯ ಸಹಾಯವಾಣಿಗೆ ಬಂದು ಹೆಚ್ಚಿನ ಕರೆಗಳು ನಿದ್ರಾಹೀನತೆಗೆ ಸಂಬಂಧಿಸಿದ್ದವು.
ಈ ಸಂದರ್ಭದಲ್ಲಿ ಮಾತನಾಡಿದ ದಿ ಸ್ಲೀಪ್ ಕಂಪೆನಿಯ ಸಿಒಒ ಕರಣ್ ಸಿಂಗ್ಲಾ ಅವರು, “ಮಂಗಳೂರಿನಲ್ಲಿ ಸ್ಲೀಪ್ ಕಂಪೆನಿ ಆರಂಭಿಸಿರುವ ಮೊದಲ ಮಳಿಗೆಯು ರಾಜ್ಯದಲ್ಲಿ ನಮ್ಮ ವ್ಯಾಪ್ತಿಯನ್ನು ವಿಸ್ತರಿಸುವ ಮತ್ತು ಜನರ ಜೀವನ ಗುಣಮಟ್ಟವನ್ನು ಹೆಚ್ಚಿಸುವ ನಮ್ಮ ಬದ್ಧತೆಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಗುಣಮಟ್ಟದ ನಿದ್ರೆಗೆ ಅಗತ್ಯವಿರುವ ಉತ್ಪನ್ನಗಳು ಮತ್ತು ಆರಾಮದಾಯಕ ಆಸನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನಿಸಿ ದಿ ಸ್ಲೀಪ್ ಕಂಪೆನಿ ರಾಜ್ಯದಲ್ಲಿ ತನ್ನ ಹೆಜ್ಜೆಗುರುತನ್ನು ವಿಸ್ತರಿಸುತ್ತಿದೆ” ಎಂದು ಹೇಳಿದರು.
ಸ್ಲೀಪ್ ಕಂಪೆನಿಯು ಗಮನಾರ್ಹ ಬೆಳವಣಿಗೆಯನ್ನು ದಾಖಲಿಸುತ್ತಿದ್ದು ಕೇವಲ ನಾಲ್ಕು ವರ್ಷಗಳಲ್ಲಿ ರಾಷ್ಟ್ರದಾದ್ಯಂತ ತನ್ನ ಅಸ್ತಿತ್ವವನ್ನು ವಿಸ್ತರಿಸಿದೆ. 2023ರ ಸೆಪ್ಟೆಂಬರ್‌ಗೆ ಅನ್ವಯವಾಗುವಂತೆ ಕಂಪೆನಿ 350 ಕೋಟಿಗಳ ವಹಿವಾಟು ನಡೆಸಿದ್ದು, ಕಳೆದ ಎರಡು ವರ್ಷಗಳಲ್ಲಿ ವಹಿವಾಟು ಪ್ರಮಾಣ ಆರು ಪಟ್ಟು ಹೆಚ್ಚಿದೆ. ದಿ ಸ್ಲೀಪ್ ಕಂಪೆನಿ ಈ ವರ್ಷದ ಅಂತ್ಯದ ವೇಳೆಗೆ ಇನ್ನೂ 150 ಮಳಿಗೆಗಳನ್ನು ತೆರೆಯುವ ಗುರಿಯನ್ನು ಹೊಂದಿದೆ.

About The Author

Leave a Reply