ಕರ್ನಾಟಕ ವಿಧಾನಪರಿಷತ್ತಿನ ನೈರುತ್ಯ ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಮಂಗಳೂರಿನ ಡಾ.ಶೇಖ್ ಬಾವ ಅವರು ನಾಮ ನಿರ್ದೇಶನ ಪತ್ರಿಕೆಯನ್ನು ಚುನಾವಣಾಧಿಕಾರಿಯಾದ ಮೈಸೂರು ವಿಭಾಗಾಧಿಕಾರಿ ಮುಂದೆ ಸಲ್ಲಿಸಿದರು.
ಶೈಕ್ಷಣಿಕ ,ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರೀಯರಾಗಿರುವ ಡಾ.ಶೇಖ್ ಬಾವರವರು ನಾಮನಿರ್ದೇಶನ ಪತ್ರಿಕೆ ಸಲ್ಲಿಸುವಾಗ ದಕ್ಷಿಣ ಕನ್ನಡ ಜಿಲ್ಲಾ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಅಧ್ಯಕ್ಷರಾದ ಸಿ.ಅಬ್ದುರ್ರಹ್ಮಾನ್ ಹಾಗೂ ಇತರ ಪದಾಧಿಕಾರಿಗಳು ಜೊತೆಗಿದ್ದರು.
ಈ ಚುನಾವಣೆಯಲ್ಲಿ ಹಿರಿಯ ಶೈಕ್ಷಣಿಕ ,ಸಾಮಾಜಿಕ ಮುಖಂಡರಾದ ಡಾ.ಶೇಖ್ ಬಾವ ಅವರನ್ನು ಮುಸ್ಲಿಂ ಲೀಗ್ ಸಂಪೂರ್ಣವಾಗಿ ಬೆಂಬಲಿಸಿದ್ದು , ಅವರ ಗೆಲುವಿಗಾಗಿ ಸಮಾನ ಮನಸ್ಕರಾದ ರಾಜ್ಯದ ಪದವೀಧರರ ಹಿತೈಷಿಗಳಾದ ಎಲ್ಲರೂ ಸಂಪೂರ್ಣ ಸಹಕಾರ ಮತ್ತು ಬೆಂಬಲವನ್ನು ನೀಡಬೇಕೆಂದು ಸಿ.ಅಬ್ದುರ್ರಹ್ಮಾನ್ ವಿನಂತಿಸಿದರು. ಜಿಲ್ಲಾ ಮುಖಂಡ ಏ ಸ್ ಈ ಕರೀಂ ಕಡಬ ಜಿಲ್ಲಾ ಮುಸ್ಲಿಂ ಲೀಗ್ ಕೋಶಾಧಿಕಾರಿ ರಿಯಾಝ್ ಹರೇಕಳ ನೌಶಾದ್ ಮಲಾರ್ ಉಪಸ್ಥಿದ್ದರು