Visitors have accessed this post 1058 times.
ಮಂಗಳೂರು: ಹರೀಶ್ ಪೂಂಜಾ ಅವರನ್ನು ಎಂಎಲ್‌ಎ ಅಂತಾ ಬಿಟ್ಟು ಬಿಡೋಕೆ ಆಗುತ್ತಾ? ಎಂಎಲ್ ಎ ಆದ್ರೆ ಪೊಲೀಸ್ ಮೇಲೆ ಗಲಾಟೆ ಮಾಡಬಹುದಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಮಂಗಳೂರಿನಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಕಾಂಗ್ರೆಸ್ ನ ಒತ್ತಡ ಅಂದರೆ ಏನು? ಕಾನೂನು ಎಲ್ಲರಿಗೂ ಒಂದೇ ಅಲ್ಲವಾ? ಹರೀಶ್ ಪೂಂಜಾ ಅವರ ವಿರುದ್ಧ 353 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದು ನಾನ್ ಬೇಲೆಬಲ್ ಅಫೆನ್ಸ್ ಇದೆ. ಈ ಪ್ರಕರಣ ಬೇಲೆಬಲ್ ಅಫೆನ್ಸ್ ಅಲ್ಲ ಎಂದು ತಿಳಿಸಿದ್ದಾರೆ.
ಶಾಸಕರ ಹರೀಶ್ ಪೂಂಜಾ ವಿರುದ್ಧ ದಾಖಲಾದ ಪ್ರಕರಣದಲ್ಲಿ ಏಳು ವರ್ಷ ಜೈಲುವಾಸ ಇದೆ. ಅವರ ಮೇಲೆ ಎರಡು ಎಫ್‌ಐಆರ್ ಇದೆ. ಶಾಸಕ ಪೂಂಜಾ ಯಾರ ಪರವಾಗಿ ಗಲಾಟೆ ಮಾಡಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ.