October 13, 2025
WhatsApp Image 2024-06-01 at 9.21.47 AM

ಮಂಗಳೂರು: ಅಲ್ಪಸಂಖ್ಯಾತ ಮತೀಯವಾದ, ಬಹುಸಂಖ್ಯಾತ ಮತೀಯವಾದ ಎರಡನ್ನೂ ಕಾಂಗ್ರೆಸ್ ಒಪ್ಪೋದಿಲ್ಲ. ಆದ್ದರಿಂದ ರಸ್ತೆಯಲ್ಲಿ ನಡೆದ ನಮಾಜ್ ಮಾಡಿರುವವರ ವೀಡಿಯೋ ಮಾಡಿ, ವೈರಲ್ ಮಾಡಿರುವವರ ವಿರುದ್ಧ ಕ್ರಮವಾಗಲಿ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ರಸ್ತೆಯಲ್ಲಿ ನಡೆದ ನಮಾಜ್ ವಿಚಾರವನ್ನು ದೊಡ್ಡದು ಮಾಡಿರುವುದು ಸರಿಯಲ್ಲ. ಮಸೀದಿಯೊಳಗಡೆ ಸ್ಥಳಾವಕಾಶವಿಲ್ಲವೆಂದು ಹೊರಗಡೆ ನಮಾಜ್ ಮಾಡಿರಬಹುದು. ಸಣ್ಣ ಸಮಸ್ಯೆಯನ್ನು ಇಷ್ಟೊಂದು ರಂಪಾಟ ಮಾಡಬೇಕೆಂದೇನಿಲ್ಲ. ಇದಕ್ಕಿಂತಲೂ ಪ್ರಚೋದನಾಕಾರಿ ಘಟನೆಗಳು ನಡೆದಿದೆ. ಪ್ರಚೋದನಾಕಾರಿ ಮಾತುಗಳು ಕೇಳಿ ಬಂದಿದೆ. ಅದರ ಮೇಲೆ ಎಲ್ಲೂ ಸುಮೋಟೊ ಕೇಸ್ ದಾಖಲಾಗಿಲ್ಲ. ಅಲ್ಲಿ ಪ್ರಾರ್ಥನೆ ಅಷ್ಟೇ ನಡೆದಿರೋದು. ಯಾವುದೇ ಅನಾಗರಿಕ ಕೆಲಸಗಳೇನು ನಡೆದಿಲ್ಲ. ಏನೋ ವ್ಯತ್ಯಾಸ ಆಗಿರೋದನ್ನು ಸರಿಪಡಿಸುವ ಕೆಲಸ ನಾವು ಮಾಡಬೇಕಿದೆ ಎಂದು ರಮಾನಾಥ ರೈ ಹೇಳಿದರು.

About The Author

Leave a Reply