ಕೋರ್ಟ್‌ ಆವರಣದಲ್ಲೇ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ..!

ಚಿಕ್ಕಮಗಳೂರು : ನ್ಯಾಯ ಸಿಗದಿದ್ದಕ್ಕೆ ಕೋರ್ಟ್‌ ಆವರಣದಲ್ಲೇ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಕೋರ್ಟ್‌ ಆವರಣದಲ್ಲೇ ಯುವಕನೊಬ್ಬ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಕೋರ್ಟ್‌ ಆವರಣದಲ್ಲಿ ಮಲ್ಲಿಕಾರ್ಜುನ್‌ ಎಂಬಾತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕನಾಗಿದ್ದು, ಸದ್ಯ ಅಸ್ವಸ್ಥ ಯುವಕನನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

 

ಜಮೀನು ವಿವಾದದ ವಿಚಾರವಾಗಿ ಕೋರ್ಟ್‌ ಬಂದಿದ್ದ ಕಡೂರು ತಾಳೂಕಿನ ದೇವರಕಾರೇಹಳ್ಳಿಯ ನಿವಾಸಿ ಮಲ್ಲಿಕಾರ್ಜುನ, ತಂದೆ ಮಾಡಿದ್ದ ಸಾಲಕ್ಕೆ ಕೋರ್ಟ್‌ ಮೆಟ್ಟಿಲೇರಿದ್ದ. ತನಗೆ ಜಮೀನು ಸೇರಿಬೇಕೆಂದು ಕೋರ್ಟ್‌ ಗೆ ಅರ್ಜಿ ಹಾಕಿದ್ದ. ಆದರೆ ಕೋರ್ಟ್‌ ನಲ್ಲಿ ನ್ಯಾಯ ಸಿಗದಿದ್ದಕ್ಕೆ ಕೋರ್ಟ್‌ ಆವರನದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕಡೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Leave a Reply