ಸ್ಟ್ರಾಂಗ್ ರೂಮ್​​ ಕೀ ಮನೆಯಲ್ಲೇ ಮರೆತು ಬಂದ ಕರ್ನಾಟಕದ ಅಧಿಕಾರಿ

ವಿಜಯಪುರ: ಲೋಕಸಭಾ ಚುನಾವಣೆ 2024ರ ಮತ ಎಣಿಕೆ ಆರಂಭವಾಗಿದ್ದು, ಬಹುತೇಕ ಎಲ್ಲಾ ಕಡೆಗಳಲ್ಲಿಯೂ ಅಂಚೆ ಮತದಾನ ಎಣಿಕೆ ಅಂತಿಮ ಹಂತಕ್ಕೆ ತಲುಪುತ್ತಿದೆ. ಪ್ರತಿ ಚುನಾವಣೆಯ ಮತ ಎಣಿಕೆ ಸಂದರ್ಭದಲ್ಲಿ ನಡೆಯುವ ಅವಾಂತರದಂತೆ ಈ ಬಾರಿ ವಿಜಯಪುರಪುರದಲ್ಲಿ ಮತ ಎಣಿಕೆಗೂ ಮುನ್ನ ಎಡವಟ್ಟು ನಡೆದಿದೆ.

ವಿಜಯಪುರದಲ್ಲಿ ಅಧಿಕಾರಿಯೊಬ್ಬರು ಸ್ಟ್ರಾಂಗ್ ರೂಮ್​ನ ಬೀಗದ ಕೈ ಮನೆಯಲ್ಲೇ ಮರೆತು ಬಂದ ಪ್ರಸಂಗ ನಡೆದಿದೆ. ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಶರೀಫ್ ಅವರು ಸ್ಟ್ರಾಂಗ್ ರೂಮ್​ನ ಬೀಗದ ಕೈಯನ್ನು ಮನೆಯಲ್ಲೇ ಬಿಟ್ಟು ಬಂದಿದ್ದರು

ಸ್ಟ್ರಾಂಗ್ ರೂಮ್​ನ ಲಾಕ್ ಓಪನ್ ಮಾಡಲು ಹೋದಾಗ ತಮ್ಮ ಬಳಿ ಕೀ ಇಲ್ಲದಿರುವುದು ತಿಳಿದುಬಂದಿದೆ. ತಕ್ಷಣವೇ ಶರೀಫ್ ತಮ್ಮ ಮನೆಗೆ ವಾಪಸ್‌ ಕೀ ತಂದು ಈಗ ಸ್ಟ್ರಾಂಗ್ ರೂಮ್ ಓಪನ್ ಮಾಡಿದ್ದಾರೆ. ಸದ್ಯ ಸ್ಟ್ರಾಂಗ್ ರೂಮ್ ಓಪನ್ ಆಗಿದ್ದು, ಮತ ಎಣಿಕೆ ಬರದಿಂದ ಸಾಗುತ್ತಿದೆ.

ಯಾರ ಕೈ ಹಿಡಿಯಲಿದ್ದಾರೆ ವಿಜಯಪುರ ಮತದಾರರು..?

ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದ್ದು, ಹಾಲಿ ಸಂಸದ ರಮೇಶ್‌ ಜಿಗಜಣಗಿ ಈ ಕ್ಷೇತ್ರದಿಂದ ನಾಲ್ಕನೇ ಬಾರಿ ಲೋಕಸಭೇಯನ್ನು ಪ್ರವೇಶ ಪಡೆಯುವ ಹುಮ್ಮಸ್ಸಿನಲ್ಲಿದ್ದಾರೆ. ವಿಜಯಪುರದಲ್ಲಿ ಹಾಲಿ ಸಂಸದ ರಮೇಶ್ ಜಿಗಜಣಗಿ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಇನ್ನು ಮಾಜಿ ಶಾಸಕ ರಾಜು ಅಲಗೂರ ಅವರಿಗೆ ಕಾಂಗ್ರೆಸ್ ಅವಕಾಶ ಕಲ್ಪಿಸಿದೆ. ಎರಡೂ ಪಕ್ಷಗಳು ಜಾತಿಯ ಲೆಕ್ಕಾಚಾರವನ್ನು ಹಾಕಿಕೊಂಡೇ ಟಿಕೆಟ್‌ ನೀಡಿವೆ. ಮೀಸಲು ಕ್ಷೇತ್ರವಾದ ಈ ಕ್ಷೇತ್ರದಲ್ಲಿ ಮೇ 7ರಂದು ಮತದಾನ ನಡೆದಿದ್ದು, ಇಂದು ಮತದಾರರ ತೀರ್ಪು ಹೊರಬೀಳಲಿದೆ.

Leave a Reply