
ಲಕ್ನೋ: ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಬಹುದೊಡ್ಡ ಸುದ್ದಿ ಹೊರಬಿದ್ದಿದೆ. ಮೂರು ಸುತ್ತಿನ ಮತ ಎಣಿಕೆಯ ನಂತರವೂ ಪ್ರಧಾನಿ ಮೋದಿ ಹಿಂದುಳಿದಿದ್ದರು. ಮೂರನೇ ಸುತ್ತಿನಲ್ಲಿ ಅಜಯ್ ರೈ 1,628 ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಸತತ ಮೂರನೇ ಸುತ್ತಿನ ಮತ ಎಣಿಕೆಯಲ್ಲಿ ಅಜಯ್ ರೈ 1,628 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಆದರೆ ನಾಲ್ಕನೇ ಸುತ್ತಿನ ಮತ ಎಣಿಕೆ ಬಳಿಕ ಮೋದಿ ಮುನ್ನಡೆ ಬಂದಿದ್ದು, 436 ಮತಗಳಿಂದ ಮುನ್ನಡೆ ಪಡೆದುಕೊಂಡಿದ್ದಾರೆ. 4ನೇ ಸುತ್ತಿನ ಮತ ಎಣಿಕೆ ಮುಕ್ತಾಯ ವೇಳೆಗೆ ಮೋದಿ 28,719 ಮತ ಪಡೆದುಕೊಂಡಿದ್ದರೆ, ಅಜಯ್ ರೈ 28,283 ಮತ ಪಡೆದುಕೊಂಡಿದ್ದಾರೆ.
ಮೊದಲೇ ಸುತ್ತಿನಿಂದಲೂ ಪ್ರಧಾನಿ ಮೋದಿ ನಿರಂತರವಾಗಿ ಹಿಂದುಳಿದಂತೆ ಕಾಣುತ್ತಿದೆ. ಆದರೆ, ಇಬ್ಬರು ಅಭ್ಯರ್ಥಿಗಳ ನಡುವಿನ ಮತಗಳ ವ್ಯತ್ಯಾಸ ನಿರಂತರವಾಗಿ ಕಡಿಮೆಯಾಗುತ್ತಿದೆ. ಮೊದಲ ಸುತ್ತಿನಲ್ಲಿ 6223 ಮತಗಳಿಂದ ಮುನ್ನಡೆ ಸಾಧಿಸಿದ್ದ ಅಜಯ್ ರೈ ಈ ವ್ಯತ್ಯಾಸವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಲಿಲ್ಲ.


