ಮಂಗಳೂರು: ಬಂಟ್ವಾಳ ತಾಲೂಕಿನ ವಿವಿಧೆಡೆ ಸುರಿದ ಗಾಳಿಮಳೆಗೆ ಸಿಡಿಲಾಘಾತ ಹಾಗೂ ಮನೆ, ಕೃಷಿಗೆ ಹಾನಿ ಉಂಟಾಗಿದೆ ಕುಡಂಬೆಟ್ಟು ಗ್ರಾಮದ ಸುಬೊಟ್ಟು ನಿವಾಸಿ ಅನಿತಾ ಪೂಜಾರಿ ಹಾಗೂ ರಾಮಯ್ಯ ಗುರಿ ನಿವಾಸಿ ಲೀಲಾವತಿ ಮತ್ತು ಮೋಹಿನಿ ಎಂಬವರಿಗೆ ಸಿಡಿಲು ಬಡಿದು ಗಾಯಗಳಾ ಗಿವೆ. ಅವರನ್ನು ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇರ್ವತ್ತೂರು ಗ್ರಾಮದ ಕುಲಾಲ್ ನಿವಾಸಿ ಜೈ ಲಕ್ಷ್ಮೀ ಎಂಬವರ ಅಡಿಕೆ ತೋಟ ಹಾಗೂ ತೆಂಗಿನ ಮರಗಳಿಗೆ ಗಾಳಿಮಳೆಯಿಂದ ಹಾನಿ ಸಂಭವಿಸಿದೆ. ಪ್ರೇಮಲತಾ ಎಂಬವರ ವಾಸ್ತವ್ಯದ ಮನೆಗೆ ತೆಂಗಿನಮರ ಬಿದ್ದು ಭಾಗಶಃ ಹಾನಿಯಾಗಿದೆ. ಅಜ್ಜಿಬೆಟ್ಟು ಗ್ರಾಮದ ಪಚ್ಚೇರಿಪಲ್ಕೆ ನಿವಾಸಿ ಅಪ್ಪಿ ಎಂಬವರ ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿಯಾಗಿದೆ. ಪಾಂಗಲ್ಪಾಡಿ ನಿವಾಸಿ ಶೋಭಾ ಎಂಬವರ ಪಕ್ಕಾ ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿಯಾಗಿದೆ. ಪುತ್ತೂರು ತಾಲೂಕಿನಾದ್ಯಂತ ಸೋಮವಾರ ಸಂಜೆ ಗುಡುಗು ಸಹಿತ ಬಿರುಸಿನ ಮಳೆಯಾಗಿದೆ. ಸಂಜೆ ಸುಮಾರು 3:30ಕ್ಕೆ ಆರಂಭ ಗೊಂಡ ಮಳೆ ಸಂಜೆ 5ರ ತನಕ ಸುರಿದಿದೆ.ಮಳೆಗೆ ನಗರದ ರಸ್ತೆಯೆಲ್ಲಾ ನೀರಿನಿಂದ ಆವೃತ್ತವಾಗಿತ್ತು. ನಗರದ ಕೋರ್ಟ್ ರಸ್ತೆಯಲ್ಲಿ ರುವ ವಿಜಿತ್ ಜ್ಯುವೆಲ್ಲರ್ಸ್ ಇನ್ನಿತರ ಅಂಗಡಿಗಳಿಗೆ ನೀರು ನುಗ್ಗಿದೆ. ದರ್ಬೆ ಪರಿಸರದ ಹಲವು ಅಂಗಡಿಗಳಿಗೆ ನೀರು ನುಗ್ಗಿದೆ. ಸಿಡಿಲು ಮಿಂಚಿನ ಕಾರಣದಿಂದಾಗಿ ಸಂಜೆ ಯಿಂದ ರಾತ್ರಿಯ ತನಕ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು.