
ಚುನಾವಣೆ ಫಲಿತಾಂಶ ಬಳಿಕ ಎನ್‌ಡಿಎ ಮೊದಲ ಸಭೆ ಆರಂಭಕ್ಕೆ ಮುನ್ನವೇ ಮೈತ್ರಿಕೂಟದಲ್ಲಿ ಅಪಸ್ವರ ಎದ್ದಿದೆ.
ನಿತೀಶ್ ಕುಮಾರ್ ಪ್ರಧಾನಿ ಹುದ್ದೆಗೆ ಸೂಕ್ತ ಅಭ್ಯರ್ಥಿ ಎಂದು ಜೆಡಿಯು ಶಾಸಕರೊಬ್ಬರು ಹೇಳಿಕೆಯೊಂದನ್ನು
ಕೊಟ್ಟಿದ್ದಾರೆ. ಪ್ರಜಾಪ್ರಭುತ್ವ ಮೌಲ್ಯಗಳನ್ನು ಗೌರವಿಸುವ ಜನರ ನಾಡಿ ಮಿಡಿತ ಅರಿತಿರುವ ನಿತೀಶ್ ಕುಮಾರ್‌ಗಿಂತ
ಬೇರೆ ಸೂಕ್ತ ಅಭ್ಯರ್ಥಿ ಇಲ್ಲ ಎಂದು ಜೆಡಿಯು ಎಂಎಲ್‌ಸಿ ಖಾಲಿದ್ ಅನ್ವರ್ ಹೇಳಿದ್ದಾರೆ. ಕಾಂಗ್ರೆಸ್ ಜೆಡಿಯು
ಸೆಳೆಯಲು ಯತ್ನ ನಡೆಸಿರುವಂತೆಯೇ ಈ ಬೆಳವಣಿಗೆ ನಡೆದಿದೆ.


