
ಮಂಗಳೂರು: ಕಾರಿನ ಬಿಡಿಭಾಗಗಳ ಅಂಗಡಿಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಲಕ್ಷಾಂತರ ಮೌಲ್ಯದ ಸೊತ್ತುಗಳು ಸುಟ್ಟು ಕರಕಲಾಗಿರುವ ಘಟನೆ ಬೋಂದೆಲ್ ನಲ್ಲಿ ನಡೆದಿದೆ.



ಇಲ್ಲಿನ ಕಾರ್ ಆಯಕ್ಸೆಸರಿ ಅಂಗಡಿ ಬೆಂಕಿಗಾಹುತಿಯಾದ ವಿಚಾರ ತಿಳಿಯುತ್ತಲೇ ಕದ್ರಿ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದೆ.
ಘಟನೆಯಿಂದ ಲಕ್ಷಾಂತರ ರೂ ನಷ್ಟ ಸಂಭವಿಸಿದೆ ಎನ್ನಲಾಗಿದೆ.
ಶಾರ್ಟ್ ಸರ್ಕ್ಯೂಟ್ ನಿಂದ ಘಟನೆ ಸಂಭವಿಸಿರಬಹುದು ಎನ್ನಲಾಗಿದೆ.