ಗುಡ್ ನ್ಯೂಸ್! ಇನ್ನೂ ವಾಹನಗಳಿಗೆ HSRP ನಂಬರ್ ಪ್ಲೇಟ್ ಹಾಕಿಸದಿದ್ರೆ ತಲೆಬಿಸಿ ಬೇಡ!

ಬೆಂಗಳೂರು: HSRP ನಂಬರ್ ಪ್ಲೇಟ್ ಅನ್ನು 2019ರ ಒಳಗೆ ಖರೀದಿ ಮಾಡಿರುವಂತಹ ಪ್ರತಿಯೊಂದು ವಾಹನದ ಮಾಲೀಕರು ಕೂಡ ರಿಜಿಸ್ಟ್ರೇಷನ್ ಮಾಡಿಸಿಕೊಂಡು ತಮ್ಮ ಶೋ ರೂಂ ಗೆ ಹೋಗಿ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಂಡು ಬರಬೇಕು ಎನ್ನುವುದಾಗಿ ಸಾರಿಗೆ ಇಲಾಖೆಯ ನಿಯಮಗಳು ಈಗಾಗಲೇ ಸ್ಪಷ್ಟಪಡಿಸಿವೆ.

ಜೂನ್ ಒಂದರ ನಂತರ ನಿಮ್ಮ ವಾಹನದಲ್ಲಿ HSRP ನಂಬರ್ ಪ್ಲೇಟ್ ಇಲ್ಲದೇ ಹೋದಲ್ಲಿ ಯಾವುದೇ ಅನುಮಾನವಿಲ್ಲದೆ ಸಾವಿರ ರೂಪಾಯಿಗಳಿಂದ ಪ್ರಾರಂಭಿಸಿ 2000 ವರೆಗೂ ಕೂಡ ಟ್ರಾಫಿಕ್ ಪೊಲೀಸರು ಫೈನ್ ವಿಧಿಸುವುದು ಗ್ಯಾರಂಟಿ ಎಂಬುದಾಗಿ ಮಾತು ಕೇಳಿ ಬರುತ್ತಿವೆ.

ಹೀಗಾಗಿ ಈ ದಂಡದಿಂದ ತಪ್ಪಿಸಿಕೊಳ್ಳಲು ನೀವು HSRP ನಂಬರ್ ಪ್ಲೇಟ್ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿರುತ್ತದೆ. ಯಾಕೆಂದ್ರೆ ಜೂನ್ ಒಂದರ ನಂತರ ಕೂಡ ನಿಮ್ಮ ನಂಬರ್ ಪ್ಲೇಟ್ ಬಾರದೆ ಇದ್ರೆ ನೀವು ರಿಜಿಸ್ಟ್ರೇಷನ್ ಮಾಡಿಸಿಕೊಂಡರೂ ಕೂಡ ದಂಡದಿಂದ ಬಚಾವ್ ಆಗುವ ಸಾಧ್ಯತೆ ಇದೆ. ಹಾಗಿದ್ರೆ ಅದು ಹೇಗೆ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅನ್ನು ಮೇ 31ರ ಒಳಗೆ ಪ್ರತಿಯೊಬ್ಬರೂ ಕೂಡ ತಮ್ಮ ವಾಹನಗಳಿಗೆ ಅಳವಡಿಸಿಕೊಳ್ಳಬೇಕು ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವಂತಹ ನಿಯಮವಾಗಿದೆ. ಇಲ್ಲವಾದಲ್ಲಿ ದಂಡ ಕಟ್ಟೋದಕ್ಕೆ ಸಿದ್ದರಾಗಬೇಕಾಗಿದೆ. ಆದರೆ ಒಂದು ವೇಳೆ ನೀವು ಕೇವಲ ನಂಬರ್ ಪ್ಲೇಟ್ ಗಾಗಿ ರಿಜಿಸ್ಟ್ರೇಷನ್ ಮಾಡಿಸಿಕೊಂಡಿರುವಂತಹ ರಸೀದಿಯನ್ನು ಟ್ರಾಫಿಕ್ ಪೊಲೀಸ್ ರಿಗೆ ತೋರಿಸಿದ್ರು ಕೂಡ ನೀವು ಈ ದಂಡದಿಂದ ಬಚಾವ್ ಆಗಬಹುದಾಗಿದೆ.

ಹೀಗಾಗಿಯೇ ನಂಬರ್ ಪ್ಲೇಟ್ ನ್ನು ಅಳವಡಿಸಿಕೊಳ್ಳದೆ ಹೋದರೂ ಕೂಡ HSRP ರಿಜಿಸ್ಟ್ರೇಷನ್ ಮಾಡಿಸಿಕೊಂಡಿರುವಂತಹ ರಸೀದಿಯನ್ನು ತೋರಿಸಿದರೂ ನಿಮಗೆ ರಿಯಾಯಿತಿಯು ದೊರಕಲಿದೆ ಅನ್ನೋದನ್ನ ನೀವು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ. ಕನಿಷ್ಟ ಪಕ್ಷ ರಿಜಿಸ್ಟ್ರೇಷನ್ ಆದರು ಪ್ರತಿಯೊಬ್ಬರು ಮಾಡಿಸಿಕೊಳ್ಳಲೇ ಬೇಕಾಗಿದೆ ಎಂದು ಹೇಳಲಾಗಿದೆ.

Leave a Reply