August 30, 2025
AA-120624-gruhalakshmi

ಬೆಂಗಳೂರು: ಇಷ್ಟು ಸಮಯ ಮಹಿಳೆಯರಿಗೆ ಮಾತ್ರ ಸಿಗುತ್ತಿದ್ದ ಗೃಹಲಕ್ಷ್ಮಿ ಯೋಜನೆಯ ಹಣ ಮುಂದಿನ ತಿಂಗಳಿನಿಂದ ತೃತೀಯ ಲಿಂಗಿಗಳಿಗೂ ಗೃಹಲಕ್ಷ್ಮಿ ಹಣ.

ಗೃಹಲಕ್ಷ್ಮಿ ಹಣಕ್ಕೆ ಜಿಲ್ಲಾಧಿಕಾರಿಗಳು ವಿತರಣೆ ಮಾಡಿರುವ ಐಡಿ ಕಾರ್ಡ್ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಈಗಾಗಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ತೃತೀಯ ಲಿಂಗಿಗಳಿಗೆ ಹಣ ನೀಡಲು ಆದೇಶಿಸಿದ್ದು, ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯನ್ನು ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಜಿಲ್ಲಾಧಿಕಾರಿಗಳಿಂದ ವಿತರಿಲ್ಪಟ್ಟ ಗುರುತಿನ ಚೀಟಿ ಬಳಸಿ ತೃತೀಯ ಲಿಂಗಿಗಳು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಈ ತಿಂಗಳ ಕೊನೆಯ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಮುಂದಿನ ತಿಂಗಳೇ ತೃತೀಯ ಲಿಂಗಿಗಳ ಖಾತೆಗೆ 2,000 ರೂಪಾಯಿ ಹಣ ಜಮೆ ಆಗಲಿದೆ.

ರಾಜ್ಯದಲ್ಲಿ 40,000 ಹೆಚ್ಚು ತೃತೀಯ ಲಿಂಗಿಗಳಿದ್ದು ಅವರ ಅಭಿವೃದ್ಧಿಗೆ ಅಥವಾ ಜೀವನೋಪಾಯಕ್ಕೆ ಗೃಹಲಕ್ಷ್ಮಿ ಹಣ ಸಹಕಾರಿಯಾಗಲಿದೆ. ಬೆಂಗಳೂರು ಒನ್, ಗ್ರಾಮ ಒನ್ ಮತ್ತು ಸೈಬರ್ ಸೆಂಟರ್‌ಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಈಗಾಗಲೇ 1.25 ಕೋಟಿ ಮಂದಿ ಗೃಹಲಕ್ಷ್ಮಿ ಯೋಜನೆಗೆ ನೊಂದಾಣಿ ಮಾಡಿಕೊಂಡಿದ್ದಾರೆ. ಅದರಲ್ಲಿ 1.24 ಕೋಟಿ ಮಂದಿಯ ಖಾತೆಗೆ 2 ಸಾವಿರ ರೂಪಾಯಿ ಹಣ ಜಮೆಯಾಗುತ್ತಿದೆ. 1.5 ಲಕ್ಷ ಮಂದಿ ಜಿಎಸ್‌ಟಿ ಮತ್ತು ಆದಾಯ ತೆರಿಗೆ ಪಾವತಿ ದಾರರಾಗಿದ್ದು ಅವರಿಗೆ ಹಣ ಸಂದಾಯ ಸ್ಥಗಿತಗೊಳಿಸಲಾಗಿದೆ. ಫಲಾನುಭವಿಗಳ ಖಾತೆಗೆ ಈವರೆಗೆ ಮೇ ತಿಂಗಳವರೆಗೂ ಹಣ ಸಂದಾಯ ಆಗಿದ್ದು ಜೂನ್ ತಿಂಗಳ ಹಣ ವರ್ವಗಾವಣೆಯಾಗಬೇಕಿದೆ.

About The Author

Leave a Reply