ಶಕ್ತಿನಗರದಲ್ಲಿ ನಡೆಯಿತು ಶ್ರೀ ಐವನ್ ಡಿಸೋಜಾ ರವರಿಗೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ

ಮಂಗಳೂರು : 21ನೇ ಪದವು ಪಶ್ಚಿಮ ವಾರ್ಡ್ ಕಾಂಗ್ರೆಸ್ ಸಮಿತಿ ಶಕ್ತಿನಗರದ ವತಿಯಿಂದ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿ ದ್ವಿತೀಯ ಬಾರಿಗೆ ಆಯ್ಕೆಯಾದ ಜನಪ್ರಿಯ ನಾಯಕರಾದ ಸನ್ಮಾನ್ಯ ಶ್ರೀ ಐವನ್ ಡಿಸೋಜಾ ರವರಿಗೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮವು ದಿನಾಂಕ ಜೂನ್16, 2024 ಶಕ್ತಿನಗರದ ತುಳುವೆರೆ ಕೂಟ ಸಭಾಭವನದಲ್ಲಿ ನಡೆಯಿತು.

 

ಈ ಕಾರ್ಯಕ್ರಮದಲ್ಲಿ ವಾರ್ಡ್ ನಂಬರ್ 21 ರ ವತಿಯಿಂದ ಐವನ್ ಡಿಸೋಜಾರವರನ್ನು ಸನ್ಮಾನಿಸಲಾಯಿತು. ನಂತರ ಶಕ್ತಿನಗರ ರಿಕ್ಷಾ ಪಾರ್ಕ್, ಅಂಗನವಾಡಿ ಕಾರ್ಯಕರ್ತೆಯರ ವತಿಯಿಂದ ಕೂಡಾ ಸನ್ಮಾನಿಸಲಾಯಿತು. ನಂತರ ಪಕ್ಷದ ಈ ವಾರ್ಡ್ ನ ಹಿರಿಯ ಕಾರ್ಯಕರ್ತರಿಗೆ ಸನ್ಮಾನಿಸಲಾಯಿತು. ಇದೇ ಸಾರ್ವಜನಿಕರ ಸಂಧರ್ಭದಲ್ಲಿ ವಿವಿಧ ಬೇಡಿಕೆಗಳ ಮನವಿಗಳನ್ನು ಐವನ್ ಡಿಸೋಜಾ ರವರಿಗೆ ನೀಡಲಾಯಿತು.

 

ಈ ಸಂಧರ್ಭದಲ್ಲಿ ನಗರ ಬ್ಲಾಕ್ ಅಧ್ಯಕ್ಷರಾದ ಪ್ರಕಾಶ್ ಸಾಲಿಯನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಉಮೇಶ್ ದಂಡಕೇರಿ, ಮ. ನಾ. ಪ ದ ಮಾಜಿ ಕಾರ್ಪೋರೇಟರ್ ಆದ ಅಬ್ದುಲ್ಲ ಅಝೀಜ್, ವಾರ್ಡ್ 21 ರ ಅಧ್ಯಕ್ಷರಾದ ದಯಾನಂದ್ ನಾಯ್ಕ್, ಜಿಲ್ಲಾ ಲೀಗಲ್ ಸೆಲ್ ನ ಮುಖ್ಯಸ್ಥರಾದ ಮನುರಾಜ್, ಬ್ಲಾಕ್ ಮಹಿಳಾ ಅಧ್ಯಕ್ಷರಾದ ರೂಪಾ ಚೇತನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ವಾರ್ಡ್ ನಂಬರ್ 21 ರ ಪದಾಧಿಕಾರಿಗಳು ಹಾಗೂ ಹಲವಾರು ಸದಸ್ಯರು ಕೂಡಾ ಉಪಸ್ಥಿತರಿದ್ದರು. ಉಮೇಶ್ ದಂಡಕೇರಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಸುಧಾಕರ್ ಜೋಗಿಯವರು ಸ್ವಾಗತ ಹಾಗೂ ವಂದಿಸಿದರು.

Leave a Reply