ಮಂಗಳೂರು:ನಗರದ ಪಿವಿಎಸ್ ಸರ್ಕಲ್ ಸಮೀಪದ ಮೊಬೈಲ್ ಶಾಪ್ ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಲಕ್ಷ್ಮೀ ಚಿನ್ನಾಕಟ್ಟಿ (24) ಅವರು ಜೂ. 17ರಂದು ರಾತ್ರಿ 10.45ರ ಸುಮಾರಿಗೆ ಮನೆಯ ಎದುರಿನಲ್ಲಿ ವಾಕಿಂಗ್‌ಗೆ ಹೋಗಿ ಬರುವುದಾಗಿ ತಾಯಿ ಬಳಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ. ಎಂಕಾಂ ವಿದ್ಯಾಭ್ಯಾಸ ಮಾಡಿರುವ ಅವರು ಸಪೂರ ಶರೀರ, ಬಿಳಿ ಮೈಬಣ್ಣ ದುಂಡು ಮುಖ ಹೊಂದಿದ್ದು ಕನ್ನಡ, ಇಂಗ್ಲಿಷ್, ತುಳು ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೊರಗೆ ಹೋಗುವಾಗ ನೀಲಿ ಬಣ್ಣದ ಟೀ ಶರ್ಟ್ ಮತ್ತು ಗ್ರೇ ಬಣ್ಣದ ಪ್ಯಾಂಟ್ ಧರಿಸಿದ್ದರೆಂದು ಮಂಗಳೂರು ದಕ್ಷಿಣ ಠಾಣೆಯ ಪೊಲೀಸರಿಗೆ – ದೂರು ನೀಡಲಾಗಿದೆ. ಪ್ರಕರಣ ದಾಖಲಾಗಿದೆ.