October 22, 2025
WhatsApp Image 2024-06-21 at 12.00.53 PM

ನೆಲ್ಯಾಡಿ: ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟ ಗಾಯಕ್ಕೊಳಗಾಗಿದ್ದ ನೇಪಾಳಿ ಮೂಲದ ಮಹಿಳೆಯೋರ್ವರು ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ನಡೆದಿದೆ.

ಮೂಲತ: ನೇಪಾಳಿಯಾಗಿದ್ದು ಕೊಕ್ಕಡ ಗ್ರಾಮದ ಮುಂಡೂರುಪಳಿಕೆ ಶಾಲೆಯ ಬಳಿ ವಾಸವಾಗಿದ್ದ ಚಕ್ರ ಬಹದ್ದೂರು ಮಲ್ಲ ಎಂಬವರ ಪತ್ನಿ ಬಸಂತಿದೇವಿ(44ವ.) ಮೃತಪಟ್ಟವರು. ಇವರು ಜೂ.11ರಂದು ಸಂಜೆ ಅಡುಗೆ ಮಾಡುವ ಸಲುವಾಗಿ ಸೌದೆ ಉರಿಸಲು ಮನೆಯಲ್ಲಿ ತೋಟದ ಕೆಲಸಕ್ಕೆ ತಂದಿಟ್ಟಿದ್ದ ಪೆಟ್ರೋಲ್ ಬಳಸಿದಾಗ ಆಕಸ್ಮಿಕವಾಗಿ ಒಮ್ಮೆಲೇ ಬೆಂಕಿಯು ಬಸಂತಿದೇವಿ ಧರಿಸಿದ್ದ ಬಟ್ಟೆಗೆ ತಗಲಿ ಮೈಯೆಲ್ಲ ತೀವ್ರ ತರದ ಸುಟ್ಟಗಾಯ ಉಂಟಾಗಿತ್ತು. ಅವರನ್ನು ಉಡುಪಿಯ ಆದರ್ಶ ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಜೂ.18ರಂದು ಸಂಜೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

About The Author

Leave a Reply