ಉಳ್ಳಾಲ: ಮನೆಯ ಗೋಡೆ ಕುಸಿದು ನಾಲ್ವರು ಸಾವು- ಯೋಗೀಶ್ ಶೆಟ್ಟಿ ಜಪ್ಪು ಭೇಟಿ

ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲದಲ್ಲಿ ಮನೆ ಕುಸಿದು ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಘಟನ ಸ್ಥಳಕ್ಕೆ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷರು ಯೋಗೀಶ್ ಶೆಟ್ಟಿ ಜಪ್ಪು ರವರು ಭೇಟಿ ನೀಡಿದರು. ಈ ಘಟನೆಗೆ ಸ್ಥಳೀಯ ಆಡಳಿತ ಮಂಡಳಿ ಮತ್ತು ಕಂದಾಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ನೀಡಲು ವಿನಂತಿಸಿದ ಜಪ್ಪುರವರು ದ.ಕ ಜಿಲ್ಲೆಯಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಜಿಲ್ಲಾ ಆಡಳಿತಕ್ಕೆ ಎಚ್ಚರಿಸಿದರು.


ಈ ಸಂದರ್ಬದಲ್ಲಿ ತುಳುನಾಡ ರಕ್ಷಣಾ ವೇದಿಕೆ ಉಳ್ಳಾಲ ಘಟಕ ಗೌರವಾಧ್ಯಕ್ಷ ಡಾ. ಶೇಕ್ ಭಾವ ತಾಲೂಕಾಧ್ಯಕ್ಷರಾದ ಅಬೂಬಕರ್ ಕೈರಂಗಳ ಪ್ರಧಾನ ಕಾರ್ಯದರ್ಶಿ ಸುಕೇಶ್ ಉಚ್ಚಿಲ್ ಮತ್ತಿತರ ಉಳ್ಳಾಲ ತಾಲೂಕು ಪದಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಯೋಗೀಶ್ ಶೆಟ್ಟಿ ಜಪ್ಪುರವರಲ್ಲಿ ರವರ ಜೊತೆ ಇದ್ದರು.

ಘಟನೆ ವಿವರ

ತಾಲೂಕಿನ ಮುನ್ನೂರು ಗ್ರಾಮದ ಮದನಿ ನಗರ ಎಂಬಲ್ಲಿ ಬುಧವಾರ ಬೆಳಗ್ಗೆ ಮನೆಯ ಹಿಂಬದಿಯಲ್ಲಿದ್ದ ಕಂಪೌಂಡ್ ಮನೆಯ ಮೇಲೆ ಕುಸಿದು ಬಿದ್ದ ಪರಿಣಾಮ ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಮನೆಯೊಳಗೆ ವಾಸ್ತವ್ಯ ವಿದ್ದ ಯಾಸಿರ್(45),ಅವರ ಪತ್ನಿ ಮರಿಯಮ್ಮ(40) ಮಕ್ಕಳಾದ ರಿಯಾನ ಮತ್ತು ರಿಫಾನ ಮೃತ ದುರ್ದೈವಿಗಳು.

 

Leave a Reply