August 30, 2025
WhatsApp Image 2024-06-27 at 9.06.16 AM

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ನಟ ದರ್ಶನ್ ಗೆಳತಿ ಪವಿತ್ರಾ ಗೌಡಗೆ ಸೌಂದರ್ಯವರ್ಧಕ ಬಳಸಿ ಮೇಕಪ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಕೊಲೆ ಪ್ರಕರಣದಲ್ಲಿ ಎ.1ಪವಿತ್ರಾ ಗೌಡ ಅವರನ್ನು ಬಂಧಿಸಿದ್ದ ಪೊಲೀಸರು ಹೆಚ್ಚಿನ ವಿಚಾರಣೆಗೆ 10 ದಿನ ಕಸ್ಟಡಿಗೆ ಪಡೆದಿದ್ದ ವೇಳೆ ಆಕೆ ತುಟಿಗಳಿಗೆ ಲಿಪ್‌ಸ್ಟಿಕ್ ಹಾಕಿಕೊಂಡು ಮೇಕಪ್ ಮಾಡಿಕೊಂಡಿದ್ದಳು. ಈ ದೃಶ್ಯಗಳು ಮಾಧ್ಯಮಗಳಲ್ಲಿ ಬಿತ್ತರವಾಗಿದ್ದನ್ನು ಗಂಭೀರವಾಗಿ ಪರಿಗಣಿಸಿ ರುವ ಡಿಸಿಪಿ ಗಿರೀಶ್, ಕಸ್ಟಡಿಯಲ್ಲಿದ್ದ ಕೊಲೆ ಪ್ರಕರಣದ ಆರೋಪಿಗೆ ಲಿಪ್‌ಸ್ಟಿಕ್ ಸೇರಿ ಸೌಂದರ್ಯವರ್ಧಕ ಬಳಸಲು ಅವಕಾಶ ಕೊಟ್ಟಿದ್ದರ ವಿವರಣೆ ನೀಡುವಂತೆ ಆಕೆಯ ಭದ್ರತಾ ಉಸ್ತುವಾರಿ ಹೊತ್ತಿದ್ದ ವಿಜಯನಗರ ಠಾಣೆಯ‌ ಮಹಿಳಾ ಪಿಎಸ್‌ಐಗೆ ಮೆಮೋ ಕೊಟ್ಟಿದ್ದಾರೆ.

ಪೊಲೀಸರ ಕಸ್ಟಡಿ ವೇಳೆ ರಾತ್ರಿ ಸಮಯದಲ್ಲಿ ಪವಿತ್ರಾ ಗೌಡಳನ್ನು ಮಡಿವಾಳದ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇಡಲಾಗಿತ್ತು. ಅಲ್ಲಿ ಆಕೆಗೆ ಅವರ ಕುಟುಂಬದವರು ಬಟ್ಟೆ ಜತೆ ಲಿಪ್‌ಸ್ಟಿಕ್‌ ಸೇರಿ ಸೌಂದರ್ಯವರ್ಧಕ ತಂದು ಕೊಟ್ಟಿರಬಹುದು. ಬಟ್ಟೆ ಬದಲಾಯಿಸುವ ವೇಳೆ ಆಕೆ ಲಿಪ್‌ಸ್ಟಿಕ್ ಹಾಕಿಕೊಂಡು ಠಾಣೆಗೆ ವಿಚಾರಣೆಗೆ ಬಂದಿರುವ ಸಾಧ್ಯತೆಗಳಿವೆ. ರೆಸ್ಟ್ ರೂಂಗೆ ಹೋಗುವುದಾಗಿ ಹೇಳಿ ಮಲಗುವ ಕೋಣೆಗೆ ಹೋಗಿದ್ದಾಗ ಮುಖ ತೊಳೆದುಕೊಂಡು ಲಿಪ್‌ಸ್ಟಿಕ್ ಹಾಕಿಕೊಂಡಿರಬಹುದು ಎನ್ನಲಾಗಿದೆ.

About The Author

Leave a Reply