November 8, 2025
WhatsApp Image 2024-06-29 at 12.20.15 PM

ಕಾರ್ಕಳ: ಯಮರೂಪದಲ್ಲಿ ರಸ್ತೆಗೆ ಅಡ್ಡ ಬಂದ ಶ್ವಾನದ ಅವಾಂತರಕ್ಕೆ ಬೈಕ್ ಪಲ್ಟಿ ಹೊಡೆದಿದ್ದು, ನವವಿವಾಹಿತೆಯೊಬ್ಬಳು ರಸ್ತೆಗೆ ಎಸೆಯಲಟ್ಟು ಜೀವತೆತ್ತ ಘಟನೆ ಕಾರ್ಕಳ ತಾಲೂಕಿನ ಈದು ಗ್ರಾಮದ ಹೊಸ್ಮಾರು ಸೇತುವೆ ಬಳಿ ಸಂಭವಿಸಿದೆ.

ಕಾರ್ಕಳ ತೆಳ್ಳಾರು ರಸ್ತೆಯ ನಿವಾಸಿ ನಿಕ್ಷಾ ಎಂಬಾತ ಘಟನೆಯಲ್ಲಿ ಪ್ರಾಣ ಕಳೆದುಕೊಂಡ ನತದೃಷ್ಠೆ. ಕಳೆದ ಎರಡು ತಿಂಗಳ ಹಿಂದೆಯಷ್ಟೇ ವಿಶಾಲ್ ಎಂಬವರೊಂದಿಗೆ ದಾಂಪತ್ಯ ಬದುಕಿಗೆ ಕಾಲಿಟ್ಟ ನಿಕ್ಷಾ, ಈದು ದ್ವಾರ ಬಳಿಯ ಒಳರಸ್ತೆಯ ಮನೆಯೊಂದರಲ್ಲಿ ಪತಿಯೊಂದಿಗೆ ಸಂಸಾರ ನಡೆಸುತ್ತಿದ್ದರೆಂಬ ಮಾಹಿತಿ ತಿಳಿದುಬಂದಿದೆ.

ಶುಕ್ರವಾರ ಮಧ್ಯಾಹ್ನದ ವೇಳೆಗೆ ಇವರು ಮಂಗಳೂರಿಗೆ ಹೊರಟಿದ್ದು, ಹೊಸ್ಮಾರು, ಶಿರ್ತಾಡಿ ಮಾರ್ಗವಾಗಿ ಮಂಗಳೂರಿಗೆ ತೆರಳುವ ಖಾಸಗಿ ಬಸ್ಸು ಏರಲೆಂದು ಪತಿಯೊಂದಿಗೆ ಬೈಕ್‌ನಲ್ಲಿ ಬರುತ್ತಿದ್ದರು. ಆ ವೇಳೆಗೆ ಈದು ಕ್ರಾಸ್ ಬಳಿಯಲ್ಲಿ ಬಸ್ಸು ಹೊರಟು ಹೋದುದರಿಂದ ಹೊಸ್ಮಾರು ಜಂಕ್ಷನ್‌ನಲ್ಲಿ ಬಸ್ಸು ಏರಲು ಸಲುವಾಗಿ ಬೈಕ್‌ನಲ್ಲಿ ಹೊಸ್ಮಾರು ಕಡೆಗೆ ಬರುತ್ತಿದ್ದರು.

ಹೊಸ್ಮಾರು ಸೇತುವೆ ಸಮೀಪ ಸ್ಮಶಾನ ಬಳಿ ರಸ್ತೆಗೆ ಅಡ್ಡವಾಗಿ ಶ್ವಾನ ಹಾದು ಹೋಗಿದ್ದು, ವೇಗವಾಗಿ ಬರುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ರಸ್ತೆಯ ಒಂದು ಬದಿಗೆ ಮಗುಚಿ ಬಿತ್ತು. ಆ ವೇಳೆಗೆ ಬೈಕ್‌ನ ಸಹಸವಾರಿ ನಿಕ್ಷಾ ರಸ್ತೆಗೆ ಎಸೆಯಲ್ಪಟ್ಟು ತಲೆ ಭಾಗಕ್ಕೆ ತೀವ್ರ ತರದಲ್ಲಿ ಗಾಯಗೊಂಡಿದ್ದರು. ಡಾಂಬರೀನ ಏಟಿಗೆ ಸ್ಥಳದಲ್ಲಿಯೇ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು.

ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply