June 6, 2026
1000669189

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಬಂಡಿತಡ್ಕ ಇಲ್ಲಿ 2026-27ನೇ ಸಾಲಿನ ಶಾಲಾ ಪ್ರಾರಂಭೋತ್ಸವವು ಅತ್ಯಂತ ವಿಜ್ರಂಭಣೆಯಿಂದ ನಡೆಯಿತು. ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಎಸ್ ಡಿ ಎಂ ಸಿ ಸದಸ್ಯರು ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಶಿಕ್ಷಕರು ಮಕ್ಕಳು ಊರ ಪರ ಊರ ವಿದ್ಯಾಭಿಮಾನಿಗಳ ಸಮಕ್ಷಮದಲ್ಲಿ, ದಾಖಲಾತಿ ಆಂದೋಲನ ಮತ್ತು ಜಾಥ ಕಾರ್ಯಕ್ರಮವು ನಡೆಯಿತು.

ನಂತರ ಹೊಸದಾಗಿ ಸೇರ್ಪಡೆಗೊಂಡಿರುವ ಮಕ್ಕಳನ್ನು ಹೂವಿನ ಮಳೆ ಸುರಿಸುವ ಮೂಲಕ ಆದರದಿಂದ ಸ್ವಾಗತ ಮಾಡಿಕೊಳ್ಳಲಾಯಿತು. ಹಾಗೂ ಹೊಸದಾಗಿ ಸೇರ್ಪಡೆಗೊಂಡಿರುವ ಮಕ್ಕಳಿಗೆ ಒಂದೊಂದು ಅಡಿಕೆ ಗಿಡವನ್ನು ನೀಡಿ,ನೆಡುವ ಮೂಲಕ ಈ ಕಾರ್ಯಕ್ರಮಕ್ಕೆ ಹೊಸ ಮೆರುಗನ್ನು ನೀಡಿದರು.

ನಂತರದಲ್ಲಿ ಸಭಾ ಕಾರ್ಯಕ್ರಮವು ನಡೆಯಿತು.ಈ ಕಾರ್ಯಕ್ರಮದ ಅಧ್ಯಕ್ಷತೆ ಸ್ಥಾನವನ್ನು ನಮ್ಮ ಬಂಡಿತ್ತಡ್ಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರು ಆಗಿರುವ ಕೃಷ್ಣಕುಮಾರ್ ಕಮ್ಮಾಜೆ ವಹಿಸಿದ್ದರು, sdmc ಅಧ್ಯಕ್ಷರಾದ ಕಾಮರುಮ್ನೆಶ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಇಸ್ಮಾಯಿಲ್ ಕುಕ್ಕಾಜೆ, ಮುಖ್ಯ ಅತಿಥಿಯಾಗಿ ಬನಾರಿ ಶ್ರೀನಿವಾಸ ಭಟ್, sdmc ಉಪಾಧ್ಯಕ್ಷರಾದ ಭುವನೇಶ್ವರಿ, ಕನ್ಯಾನ ಗ್ರಾಮ ಪಂಚಾಯತ್ ಮಾಜಿ ಸದಸ್ಯರು ಆಗಿರುವ ಬುಶ್ರಿಯ, ಅಂಗನವಾಡಿ ಕಾರ್ಯಕರ್ತೆ ಆಗಿರುವ ಶಾರದಾ, ಕನ್ಯಾನ, ಕರೋಪಾಡಿ ಹಾಲು ಉತ್ಪಾದಕ ಸಂಘದ ಸದಸ್ಯರಾದ ರಾಧಾಕೃಷ್ಣ, ಉಮರ್ ಕೊಣಾಲೆ ಹಾಗೂ ಶಶಿಧರ್ ಬಂಡಿತಡ್ಕ ಉಪಸ್ಥಿತರಿದ್ದರು. ಕಾರ್ಯಕ್ರಮವು ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾಯಿತು .

ಕಳೆದ ದಿನಗಳಲ್ಲಿ ನಮ್ಮನ್ನಗಲಿದ ಹಳೇವಿದ್ಯಾರ್ಥಿಗಳಿಗೆ ಮೌನ ಪ್ರಾರ್ಥನೆ ನಡೆಸಲಾಯಿತು.ನಂತರ ಒಂದನೇ ತರಗತಿಗೆ ಹೊಸದಾಗಿ ದಾಖಲಾತಿ ಹೊಂದಿರುವ 1ನೇ ತರಗತಿ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಯಾದ ಬನಾರಿ ಶ್ರೀನಿವಾಸ ಭಟ್ ರವರು ಕೈ ಹಿಡಿದು ಅಕ್ಕಿಯಲ್ಲಿ ಅಕ್ಷರಭ್ಯಾಸವನ್ನು ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು ಹಾಗೂ ದಾಖಲಾತಿ ಹೊಂದಿರುವಂತಹ ಎಲ್ಲಾ ಮಕ್ಕಳಿಗೂ ಕಲಿಕೋಪಕರಣಗಳನ್ನು ನೀಡಿ ಸ್ವಾಗತಿಸಲಾಯಿತು.

ಉಚಿತ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು. ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಹೊಸದಾಗಿ ದಾಖಲಾತಿ ಹೊಂದಿರುವ ವಿದ್ಯಾರ್ಥಿಗಳಿಗೆ ಒಂದು ಸಾವಿರ ರೂಪಾಯಿ ಠೇವಣಿ, ಉಚಿತವಾಗಿ ನೋಟ್ ಪುಸ್ತಕಗಳು ಹಾಗೂ ಉಚಿತವಾಗಿ ಹೊರಸಂಚಾರ ಮಾಡುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದಲ್ಲಿ ಅತಿಥಿ ಶಿಕ್ಷಕಿಯಾದ ವನಿತ ಕಾರ್ಯಕ್ರಮವನ್ನು ನಿರೂಪಿಸಿದರು.ಶಾಲಾ ಪ್ರಭಾರ ಮುಖ್ಯ ಶಿಕ್ಷಕಿಯಾದ ಸಕೀನಾ ಎಸ್ ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿ ಧನ್ಯವಾದಗೈದರು. ಕಾರ್ಯಕ್ರಮವನ್ನು ರಾಷ್ಟ್ರಗೀತೆಯೊಂದಿಗೆ ಅಂತಿಮಗೊಳಿಸಿದರು.

ಬೆಳಗಿನ ಲಘು ಉಪಹಾರದ ವ್ಯವಸ್ಥೆಯನ್ನು ಹಳೆ ವಿದ್ಯಾರ್ಥಿ ಸಂಘದ ಗೌರವ ಅಧ್ಯಕ್ಷರಾದ ಶ್ರೀ ಕೃಷ್ಣಕುಮಾರ್ ಕಮ್ಮಾಜೆ ಹಾಗೂ ಅಧ್ಯಕ್ಷರಾದ ಇಸ್ಮಾಯಿಲ್ ಕುಕ್ಕಾಜೆ ಇವರುಗಳು ಮಾಡಿದರು. ಪೌಷ್ಟಿಕದೊಂದಿಗೆ ಸಿಹಿ ಭೋಜನವನ್ನು ಸವಿದರು.

About The Author

Leave a Reply