July 19, 2026
ut-khader-97684748

ಮಂಗಳೂರು: ಬರ್ಗರ್, ಪಿಝಾ ಸೇರಿದಂತೆ ಜಂಕ್ ಫುಡ್‌ಗಳಿಂದ ಸಾಕಷ್ಟು ರೋಗಗಳಿಗೆ ಕಾರಣವಾಗುತ್ತಿರುವುದ ರಿಂದ 10ನೆ ತರಗತಿವರೆಗಿನ ಶಾಲೆ ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ ಇಂತಹ ಆಹಾರ ಪದಾರ್ಥಗಳನ್ನು ನಿಷೇಧಿ ಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತಿದೆ ಎಂದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯ RAPCC ಯ ಸಭಾಂಗಣದಲ್ಲಿ ಶನಿವಾರ ಆಸ್ಪತ್ರೆಯ ಕುಂದುಕೊರತೆ ಹಾಗೂ ಅಭಿವೃದ್ಧಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಆಹಾರ ಸುರಕ್ಷತೆಯಲ್ಲಿ ಮಹತ್ತರವಾದ ಬದಲಾವಣೆ ತರುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿರುವ ಆಹಾರ ಪದಾರ್ಥಗಳ ತಪಾಸಣಾ ಪ್ರಯೋಗಾಲಯವನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿಯೂ ಕ್ರಮ ವಹಿಸಲಾ ಗುತ್ತಿದೆ.ಜಂಕ್ ಫುಡ್‌ಗಳನ್ನು ತಯಾರಿಸುವ ಅದೆಷ್ಟೇ ದೊಡ್ಡ ಕಂಪನಿಗಳಾಗಿದ್ದರೂ ಆಹಾರದ ಗುಣಮಟ್ಟದಲ್ಲಿ ಲೋಪ ದೋಷಗಳು ಕಂಡು ಬಂದಲ್ಲಿ ಅಂತಹ ಕಂಪನಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರೂ ಜಯ ಸಿಗದಂತಹ ರೀತಿಯಲ್ಲಿ ದಾಖಲೆಯನ್ನು ಇಟ್ಟುಕೊಳ್ಳುವಂತಹ ಅತ್ಯಾಧುನಿಕ ಲ್ಯಾಬ್‌ನ್ನು ರಾಜ್ಯದಲ್ಲಿ ಸ್ಥಾಪಿಸಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಲಾಗಿದೆ ಎಂದವರು ಹೇಳಿದರು.

About The Author

Leave a Reply