

ರಾಮನಗರ : ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಪ್ಯಾಂಟ್ ನಲ್ಲಿ ಖಾಕಿ ಚೆಡ್ಡಿ ಇದೆ. ಬಿಜೆಪಿಗಿಂತ ಬಿಗಿಯಾದ ಖಾಕಿ ಚೆಡ್ಡಿ ಕುಮಾರಸ್ವಾಮಿ ಹಾಕಿದ್ದಾರೆ. ಅವರ ಆಸ್ತಿಯನ್ನು ತೆಗೆದರೆ ರಾಜ್ಯಕ್ಕೆ 3 ಬಜೆಟ್ ಮಂಡಿಸಬಹುದು ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಜನಾಂದೋಲನ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕುಮಾರಸ್ವಾಮಿ ಮ್ಯಾಚ್ ಫಿಕ್ಸಿಂಗ್ ಮಾಡ್ತಾರೆ. ಕೇವಲ 37 ಸೀಟ್ ಗೆದ್ದು ನಮ್ಮ ಜೊತೆ ಬಂದಿದ್ದರು. ಅವರನ್ನ ನಂಬಬೇಡಿ ಅಂತ ಕಾಂಗ್ರೆಸ್ ನವರಿಗೆ ಅವಾಗ್ಲೆ ಹೇಳಿದ್ದೇ.ಕ್ಷೇತ್ರದಲ್ಲಿ ಡಿಕೆ ಸುರೇಶ್ ಅವರ 1 ಪರ್ಸೆಂಟ್ ಕೆಲಸ ಕುಮಾರಸ್ವಾಮಿ ಮಾಡಿಲ್ಲ. ಕೇವಲ ಡಂಗೂರ ಹೊಡೆದುಕೊಂಡು ಬರ್ತಾರೆ ಎಂದು ವಾಗ್ದಾಳಿ ಮಾಡಿದರು.
ಬಿಜೆಪಿ ಅಧಿಕಾರದಲ್ಲಿ ಬಡವರಿಗೆ ಒಂದುಮನೆ ಕೊಟ್ಟಿಲ್ಲ. ಯಾಕೆ ಬಿಜೆಪಿ-ಜೆಡಿಎಸ್ ಗೆ ಬಡವರ ಬಗ್ಗೆ ಕಾಳಜಿ ಇಲ್ವಾ? ಕುಮಾರಸ್ವಾಮಿ ಅವರೇ ರಾಮನಗರದ ಜನ್ಮಕೊಟ್ಟ ಕ್ಷೇತ್ರ ಅಂತಿರಿ. ರಾಮನಗರದಲ್ಲಿ ಎಷ್ಟು ಮನೆ ಕೊಟ್ಟಿದ್ದೀರಿ.? ನಿಮಗೆ ಓಪನ್ ಚಾಲೆಂಜ್ ಹಾಕ್ತೀನಿ ಕೇವಲ 330 ಮನೆ ಕೊಟ್ಟಿದ್ದೀರಿ. ನಾವು ಎಷ್ಟು ಮನೆ ಕೊಟ್ಟಿದ್ದೀವಿ ಬನ್ನಿ ಚರ್ಚೆ ಮಾಡೋಣ ಎಂದು ಹೇಳಿದರು.
ಇನ್ನೂ 15ದಿನಗಳಲ್ಲಿ 5ಸಾವಿರ ಮನೆ ಮಂಜೂರು ಮಾಡ್ತೀವಿ. ಮೈನಾರಿಟಿ ಅಭಿವೃದ್ಧಿಗೆ 10 ಕೋಟಿ ರೂ. ಕೊಡ್ತೀನಿ. ಉಪಚುನಾವಣೆ ಹಿನ್ನೆಲೆ ಕ್ಷೇತ್ರಕ್ಕೆ ಜಮೀರ್ ಹೊಸ ಕೊಡುಗೆ. ಬಿಜೆಪಿ-ಜೆಡಿಎಸ್ ಪಾದಯಾತ್ರೆಯಿಂದ ಏನೂ ಆಗಲ್ಲ. ನಾವೆಲ್ಲಾ ಇರೋ ವರೆಗೂ ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ಏನೂ ಮಾಡೋಕಾಗಲ್ಲ ಎಂದು ಗುಡುಗಿದರು.






