Visitors have accessed this post 1147 times.
ಉಪ್ಪಿನಂಗಡಿ; ಕಾಲೇಜು ಹೋಗುತ್ತಿದ್ದಾಗ ವಿದ್ಯಾರ್ಥಿಯೊಬ್ಬ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಕಡಬ ತಾಲೂಕು ಕೊಯಿಲ ಗ್ರಾಮದ ಗಂಡಿಬಾಗಿಲು ನಿವಾಸಿ ಮುಹಮ್ಮದ್ ಸಿರಾಜುದ್ದೀನ್ (17) ಮೃತ ವಿದ್ಯಾರ್ಥಿ
ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದ ಸಿರಾಜುದ್ದೀನ್ ಶನಿವಾರ ಕಾಲೇಜಿಗೆಂದು ಬೆಳಿಗ್ಗೆ ತನ್ನ ಗೆಳೆಯರೊಂದಿಗೆ ಹೊರಟು ಬಂದಿದ್ದ. ಕಾಲೇಜಿನ ದಾರಿ ಮಧ್ಯೆ ಬಿ.ಪಿ. ಲೋ ಸಮಸ್ಯೆಯಿಂದ ಈತ ತಲೆ ತಿರುಗಿ ಬಿದ್ದಿದ್ದಾನೆ ಜೊತೆಗಿದ್ದ ಸ್ನೇಹಿತರು ಈತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ